ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಕ್ಯೂ ಸ್ಪೈಡರ್ ಕಂಪನಿಗೆ ನೇಮಕ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಿದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ 8 ವಿದ್ಯಾರ್ಥಿಗಳು ಕ್ಯೂ ಸ್ಪೈಡರ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇಮಕಗೊಂಡಿರುತ್ತಾರೆ.
ಕ್ಯಾಂಪಸ್‌ನ ನೇಮಕಾತಿ ಪ್ರಕ್ರಿಯೆಯಲ್ಲಿ ಕಾಲೇಜಿನ 15 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಹಂತಗಳ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ತೃತೀಯ ಬಿಬಿಎಯ ಅನುಷಾ ಕೆ.ಬಿ., ಕೌಶಲ್ಯ ಎಲ್., ನಿಖಿತಾ ಎಂ. ಶೆಟ್ಟಿ, ಫಾತಿಮತ್ ಶಮ್ನಾ, ರೋಹನ್ ರೈ ಹಾಗೂ ರಕ್ಷಿತ್ ಎ. ಮತ್ತು ಅಂತಿಮ ಬಿಕಾಂನ ಸಲುಶ್ ಪಿ.ಪಿ. ಆಯ್ಕೆಯಾಗಿರುತ್ತಾರೆ.
ಕ್ಯೂ ಸ್ಪೈಡರ್ ಸಾಪ್ಟವೇರ್ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಕೆಲವು ವರ್ಷಗಳಿಂದ ಕಾಲೇಜಿನಲ್ಲಿ ಕ್ಯಾಂಸ್ ನೇಮಕಾತಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತದೆ. ಈ ವರ್ಷ ನಡೆಸಿದ ನೇಮಕಾತಿ ಕಾರ್ಯಕ್ರಮದ ಮೂಲಕ ನಮ್ಮ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ಸಂತೋಷ ಪಡುತ್ತೇನೆ. ನಮ್ಮ ವಿದ್ಯಾರ್ಥಿಗಳ ಈ ಸಾಧನೆಯು ಅವರ ಪರಿಶ್ರಮ ಮತ್ತು ಕೌಶಲ್ಯಗಳಿಗೆ ಸಾಕ್ಷಿಯಾಗಿದೆ. ಅದರೊಂದಿಗೆ ಅಧ್ಯಾಪಕರು ನೀಡಿದ ಮಾರ್ಗದರ್ಶನ ಹಾಗೂ ಸಂಸ್ಥೆಯಲ್ಲಿ ದೊರಕಿದ ಗುಣಮಟ್ಟದ ಶಿಕ್ಷಣವೂ ಸಹಕಾರಿಯಾಗಿರುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಲು ಉದ್ಯಮದ ವರಿಷ್ಟರೊಂದಿಗೆ ಸಂಸ್ಥೆಯ ಸಂಬಂಧವನ್ನು ಬಲಪಡಿಸಲು ಸಂಸ್ಥೆಯು ಸದಾ ಉತ್ಸುಕವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ತಿಳಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳನ್ನು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೇಮಲತಾ ಕೆ. ಹಾಗೂ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಅಭಿನಂದಿಸಿದ್ದಾರೆ.