ನವರಾತ್ರಿ ಸಂದರ್ಭ: ಧರ್ಮಸ್ಥಳದಲ್ಲಿ ಸುಗಮ ಸಂಗೀತ ಕಾರ್ಯಕ್ರಮ
Wednesday, October 9, 2024
ಉಜಿರೆ: ನವರಾತ್ರಿ ಸಂದರ್ಭದಲ್ಲಿ ಭಾನುವಾರ ರಾತ್ರಿ ಮಂಗಳೂರಿನ ಖ್ಯಾತ ಗಾಯಕಿ ತನುಶ್ರೀ ಮತ್ತು ಬಳಗದವರು ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದರು.
ಮಂಗಳೂರಿನ ಸ್ನೇಹಿತ್ ಮತ್ತು ನಿನಾದ ಸಂಗೀತ ಕಾರ್ಯಕ್ರಮದಲ್ಲಿ ಹಾಡುಗಾರರಾಗಿ ಸಹಕರಿಸಿದರು. ಕೀಬೋರ್ಡ್ ವಾದಕರಾಗಿ ಸತೀಶ್ ಸುರತ್ಕಲ್, ತಬಲಾ ವಾದಕರಾಗಿ ದೀಪಕ್‌ರಾಜ್, ಉಳ್ಳಾಲ ರಿದಂಪ್ಯಾಡ್ ವಾದಕರಾಗಿ ಸಂತೋಷ್ ಪನ, ಉಡುಪಿ, ಕೊಳಲುವಾದಕರಾಗಿ ಸಂತೋಷ್ ವಿಟ್ಲ, ನಿರೂಪಕರಾಗಿ ಶ್ರೀನಿಧಿ, ಬಂಟ್ವಾಳ ಸಹಕರಿಸಿದರು.


