ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಫಲಿತಾಂಶ: ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಿಂದ ಅಭಿನಂದನೆ

ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಫಲಿತಾಂಶ: ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಿಂದ ಅಭಿನಂದನೆ

ಮಂಗಳೂರು: ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವು ಬಿಜೆಪಿ ಪಕ್ಷಕ್ಕೆ ಜನತೆಯು ಮತ್ತೊಮ್ಮೆ ಆಶೀರ್ವಾದ ಮಾಡಿರುವುದಕ್ಕೆ ಸಾಕ್ಷಿಯಾಗಿದೆ. 

ಬಿಜೆಪಿ ಸರಕಾರದ ಜನ ಪರ ಕಾರ್ಯಕ್ರಮಗಳಿಗೆ ಜನತೆಯು ಮನ್ನಣೆ ನೀಡಿ, ವಿಶ್ವಾಸ ವ್ಯಕ್ತಪಡಿಸಿದ್ದು, ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಸರಕಾರ ರಚಿಸುತ್ತದೆ ಅಂತ ಬಿಂಬಿತವಾಗಿದ್ದರೂ. ಫಲಿತಾಂಶ ಬಂದಾಗ ಬಿಜೆಪಿಗೆ ಜನತೆಯ ಸಂಪೂರ್ಣ ಆಶೀರ್ವಾದ ಸಿಕ್ಕಿರುವುದು ನಮ್ಮ ಕಾರ್ಯಕರ್ತರಲ್ಲಿ ಸಂತಸವನ್ನು ತಂದಿದೆ. 

ಕಾಂಗ್ರೆಸ್ ಪಕ್ಷವು ಅಬ್ಬರದ ಗ್ಯಾರಂಟಿಗಳನ್ನು ಹರಿಯಾಣಾದ ಚುನಾವಣಾ ಪ್ರನಾಳಿಕೆಯಲ್ಲಿ ಘೋಷಿಸಿದ್ದರೂ ಕಾಂಗ್ರೆಸ್ ದೇಶಾದ್ಯಂತ ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದರ ಪರಿಣಾಮವು ಈ ಫಲಿತಾಂಶದಲ್ಲಿ ಮೂಡಿಬಂದಿದೆ. ಹಾಗೇನೆ ಜಮ್ಮವಿನಲ್ಲಿ ಬಿಜೆಪಿ ಪಕ್ಷವು ಹಿಂದಿನ ಫಲಿತಾಂಶಕ್ಕಿಂತ ಇಂದು ಉತ್ತಮ ಪಡಿಸಿಕೊಂಡದ್ದು ಕಂಡುಬರುತ್ತದೆ. 

ಹರಿಯಾಣದಲ್ಲಿ ಬಿಜೆಪಿಯು ಸತತವಾಗಿ ಮೂರನೆ ಬಾರಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣೆಯನ್ನು ಹಿಡಿಯುವಂತೆ ಮಾಡಿದ ಜನತೆಗೆ ದ.ಕ. ಬಿಜೆಪಿಯು ಕೃತಜ್ಞತೆಯನ್ನು ಸಲ್ಲಿಸುತ್ತದೆ ಹಾಗೂ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಯನ್ನು ವ್ಯಕ್ತಪಡಿಸುತ್ತದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article