
ಸಂಸದ ಸೆಂಥಿಲ್ ರಮಾನಾಥ ರೈ ಮನೆಗೆ ಭೇಟಿ
Sunday, November 10, 2024
ಬಂಟ್ವಾಳ: ತಮಿಳುನಾಡಿನ ತಿರುವಳ್ಳೂರ್ ಸಂಸದರು, ದ.ಕ. ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ಅವರು ಭಾನುವಾರ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಕಳ್ಳಿಗೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಪ್ರಸಕ್ತ ಜಿಲ್ಲೆ, ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಡೆನ್ಜಿಲ್ ನೊರೊನ್ಹಾ ಮೊದಲಾದವರಿದ್ದರು.
ಇದೇ ವೇಳೆ ಸಂಸದ ಸೆಂಥಿಲ್ ಅವರನ್ನು ಮಾಜಿ ಸಚಿವ ರಮಾನಾಥ ರೈ ಗೌರವಿಸಿದರು.