ಡಿ.27, 28 ಮತ್ತು 29 ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನ

ಡಿ.27, 28 ಮತ್ತು 29 ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನ


ಮಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಡಿಸೆಂಬರ್ 27, 28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ್ ಕಜೆ ಹೇಳಿದರು.

ಅವರು ಇಂದು ನಗರದ ಭಾರತೀ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, 1943ನೇ ಇಸವಿಯಲ್ಲಿ ಹವ್ಯಕ ಸಂಘ ಸ್ಥಾಪಿಸಲಾಯಿತು. ಬಳಿಕ 1969 ರಲ್ಲಿ ಮೊದಲನೇ ಸಮ್ಮೇಳನ ಪುತ್ತೂರಿನಲ್ಲಿ, 2012ರಲ್ಲಿ ಬೆಂಗಳೂರಿನಲ್ಲಿ ಈ ಬಾರಿ ಮತ್ತೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ. ಎರಡನೇ ಸಮ್ಮೇಳನದಲ್ಲಿ ಕೇವಲ ನಮ್ಮವರು ಮಾತ್ರವಲ್ಲ ದಲಿತರು, ಮುಸ್ಲಿಮರು ಕೂಡ ಭಾಗವಹಿಸಿದ್ದರು. ಈ ಬಾರಿಯೂ ಎಲ್ಲಾ ಧರ್ಮದವರು ಭಾಗವಹಿಸಬೇಕು ಎಂದರು.

ಸಮ್ಮೇಳನದಲ್ಲಿ 6 ಸಾವಿರ ಪುಸ್ತಕ ಪ್ರದರ್ಶನ ನಡೆಯಲಿದೆ. ಪ್ರಥಮವಾಗಿ ಚಿತ್ರಿಕರಣಗೊಂಡಿರುವ ಪ್ರಥಮ ನಾಟಕ ಪ್ರದರ್ಶನಗೊಳ್ಳಲಿದೆ. ನೃತ್ಯೋತ್ಸವ, ವಾಧ್ಯ ಮೈಭವ, ಭಾವ ಸಂಗಮ, ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಯಜ್ಞ ಮಂಡಲ ಪ್ರದರ್ಶನ, ಹವ್ಯಕರ ಪರಂಪರೆಯ ವಸ್ತು ಪ್ರದರ್ಶನ, ಹವ್ಯಕರ ಆಹಾರ ಪ್ರದರ್ಶನ, ಹವ್ಯಕರ ಪಾಕೋತ್ಸವ, ಆಲೆ ಮನೆ, ದೇಶೀಯ ಗೋವು ತಳೆಗಳ ಪ್ರದರ್ಶನ, ರಂಗೋಲಿ ಪ್ರದರ್ಶನ, ಭಗವದ್ಗೀತೆ ಓದು, ಅಡಕೆ ಕೃಷಿ ದರ್ಶನ, 108 ವರ್ಷಗಳ ಸಂಗ್ರಹದ ಪಂಚಾಂಗ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ 567 ಮಂದಿ ಸಾಧಕರಿಗೆ ಸನ್ಮಾನಿಸಲಾಯಿತು. 108 ವರ್ಷಗಳ ಪಂಚಾಂಗದ ಪ್ರದರ್ಶನ  ಮಾಡಲಾಗುವುದು. 8 ಕೋಷ್ಠಿಯಲ್ಲಿ 18 ವಿಷಯಗಳ ಚಿಂತನ ಮಂಥನ, 81 ವಾಣಿಜ್ಯ ಮಳಿಗೆಗಳು, 81 ಕರಕುಶಲ ವಸ್ತುಗಳ ಮಳಿಗೆಗಳು, 100ಕ್ಕೂ ಅಧಿಕ ಹವ್ಯಕ ಖ್ಯಾದ್ಯಗಳ ಸ್ವಾದ ಆಹಾರ ಪ್ರದರ್ಶನ ನಡೆಯಲಿದೆ. ವಾಕತನ್, ಬೈಕ್ ರ‍್ಯಾಲಿ ನಡೆಯಲಿದೆ ಎಂದರು.

ಪ್ರಮುಖರಾದ ಗೀತಾದೇವಿ ಸುಂದರ್, ಸುಮಾ ರಮೇಶ್, ರಮೇಶ್ ಭಟ್, ಉದಯ್ ಶಂಕರ್ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article