ಲಕ್ಷದೀಪೋತ್ಸವದಲ್ಲಿ ಯಕ್ಷಗಾನ ತಾಳಮದ್ದಲೆ

ಲಕ್ಷದೀಪೋತ್ಸವದಲ್ಲಿ ಯಕ್ಷಗಾನ ತಾಳಮದ್ದಲೆ


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಗುರುವಾರ ವಸ್ತು ಪ್ರದರ್ಶನ ಮಂಟಪದಲ್ಲಿ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಜರುಗಿತು.

ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಗವು ಪ್ರಸ್ತುತ ಪಡಿಸಿದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ಭಾಸ್ಕರ್ ಬಾರ್ಯ ನಿರ್ದೇಶನದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ವಿಘ್ನವಿನಾಶಕ ವಿನಾಯಕ ಸ್ತುತಿಸುವುದರ ಮೂಲಕ ಆರಂಭಗೊಂಡಿದು. ನಂತರದಲ್ಲಿ ಕಥಾಮೃತವನ್ನು ಉಣಬಡಿಸಿದ ಕಲಾವಿದರ ತಂಡ ಅಗ್ರಹಾರದಲ್ಲಿ ತಸ್ಕರರಭಾದೆ ಉಂಟಾದಾಗ ವಿಪ್ರರು ಪರಿಹಾರಕ್ಕಾಗಿ ಪಾಂಡವ ಸಹೋದರ ಬಿಲ್ವಿದ್ಯಾಚತುರ ಅರ್ಜುನನ ಮೊರೆಹೋಗುತ್ತಾರೆ, ವಿಪ್ರರ ಸಮಸ್ಯೆಯನ್ನು ಬಗೆಹರಿಸಲು ಒಪ್ಪುವ ಅರ್ಜುನನಿಗೆ ತೊಡುಕೊಂಟಾಗುತ್ತದೆ. ಅದೇನೆಂದರೆ ಅರ್ಜುನ ಆಯುಧದಾರಣೆ ಮಾಡಲು ಆಯುಧಗೃಹಕ್ಕೆ ಅಣ್ಣನಾದ ಯುಧಿಷ್ಠಿರನ ಶಯನಗೃಹವನ್ನು ದಾಟಿ ಹೋಗಬೇಕಾಗಿರುತ್ತದೆ.

ಪಾಂಡವರು ದ್ರೌಪದಿಯನ್ನು ವರಿಸುವಾಗ ನಾರದ ಮುನಿಗಳು ಒಂದು ನಿಭಂದನೆಯನ್ನು ಹಾಕಿರುತ್ತಾರೆ. ಆ ನಿಭಂದನೆಯ ಪ್ರಕಾರ ಅರ್ಜುನ ಶಯನಗೃಹವನ್ನು ಪ್ರವೇಶಿಸಲು ನಿರ್ಭಂದವಿದೆ, ಆದರೆ ವಿಪ್ರರನ್ನು ಅಸುರರಿಂದ ರಕ್ಷಿಸಬೇಕು. ಈ ಧರ್ಮಸಂಕಟದಲ್ಲಿ ಸಿಲುಕುವ ಅರ್ಜುನ ಕೊನೆಗೆ ಪ್ರಜಾರಕ್ಷೆಗಾಗಿ ಶಯನಗೃಹವನ್ನು ಪ್ರವೇಶಿಸಿ ತನ್ನ ಅಣ್ಣನ ಕೆಂಗಣ್ಣಿಗೆ ಗುರಿಯಾಗುತ್ತಾನೆ.ನಂತರದಲ್ಲಿ ಆತ ಪ್ರಾಯಶ್ಚಿತಕ್ಕಾಗಿ ತೊಡುವ ತೀರ್ಥಯಾತ್ರಾ ನಿರ್ಧಾರ ಪ್ರಸಂಗ ತಂಡದ ಕಲಾವಿದರಿಂದ ಅತ್ಯಂತ ಮನೋಹರವಾಗಿ ಮೂಡಿಬಂತು.

ಹಿಮ್ಮೇಳದಲ್ಲಿ ತೆಂಕಬೈಲು ಮುರುಳಿಕೃಷ್ಣ ಶಾಸ್ರಿ, ಅಜ್ಯಾಣ ಜಯರಾಮ್ ಭಟ್, ಕೆ.ಜಿ. ಜಗನ್ನಿವಾಸ ರಾಯ, ಶುಭಾ ಅಡಿಗ, ಶಶಿಕಲಾ ದುರ್ಗಪ್ಪ, ಪ್ರೇಮಲತಾ ಟಿ. ರಾವ್, ಹರಿಣಾಕ್ಷಿ ಜಯ ಶೆಟ್ಟಿ ಅವರನ್ನೊಳಗೊಂಡ ತಂಡ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article