ಪ್ಯಾಲೆಸ್ತಿನ್ ಪರ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮೊಕದ್ದಮೆ: ಪೊಲೀಸ್ ನಡೆಗೆ ಸಿಪಿಐ ಖಂಡನೆ

ಪ್ಯಾಲೆಸ್ತಿನ್ ಪರ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮೊಕದ್ದಮೆ: ಪೊಲೀಸ್ ನಡೆಗೆ ಸಿಪಿಐ ಖಂಡನೆ

ಮಂಗಳೂರು: ನ.4 ರಂದು ಸಂಜೆ ಕ್ಲಾಕ್ ಟವರ್ ಬಳಿ ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಪ್ಯಾಲೆಸ್ತಿನ್ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸ್ ಇಲಾಖೆ ಅನುಮತಿ ನೀಡಲು ನಿರಾಕರಿಸಿತು. 

ಅದ್ದರಿಂದ ಈ ಎರಡು ಪಕ್ಷಗಳ ಕಾರ್ಯಕರ್ತರು ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಇದರ ವಿರುದ್ಧ, ಈ ಪಕ್ಷಗಳ 11 ಕಾರ್ಯಕರ್ತರ ಮೇಲೆ, ಪೊಲೀಸರು ಮೊಕದ್ದಮೆ ಹೂಡಿರುವರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಶಾಂತಿಯುತ ಪ್ರತಿಭಟನೆ ನಾಗರಿಕರ ಮೂಲಭೂತ ಹಕ್ಕಾಗಿದೆ. ಅದರ ವಿರುದ್ಧ ಪೊಲೀಸರು ಮೊಕದ್ದಮೆ ಹೂಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ತೀವ್ರವಾಗಿ ಖಂಡಿಸುತ್ತದೆ. ಈ ಮೊಕದ್ದಮೆಯನ್ನು ಕೂಡಲೇ ಹಿಂಪಡೆಯಬೇಕೆಂದು ಸಿಪಿಐ ರಾಜ್ಯ ಸರಕಾರವನ್ನು ಪ್ರಕಟಣೆಯಲ್ಲಿ ಒತ್ತಾಯಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article