
ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಚುನಾವಣೆ: ಯು.ಟಿ. ಖಾದರ್ ಮತ ಚಲಾವಣೆ
Sunday, November 10, 2024
ಮಂಗಳೂರು: ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತ ಬೆಂಬಲಿಸಿದ ಜಾಂಬಿಯಾ ಪರ ಕರ್ನಾಟಕ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮತ ಚಲಾಯಿಸಿದರು.
ಭಾರತ ಬೆಂಬಲಿಸಿದ ಜಾಂಬಿಯಾದ ಡಾ. ಕ್ರಿಸ್ಟೋಪರ್ ಕಲಿಲಾ ಗೆಲುವು ಸಾಧಿಸಿದ್ದು ಮುಂದಿನ ಅವಧಿಗೆ ಸಿಪಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕರ್ನಾಟಕದ ಉಳ್ಳಾಲದಲ್ಲಿ ಹುಟ್ಟಿ ಬೆಳೆದ ಓರ್ವ ವ್ಯಕ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮತ ಚಲಾಯಿಸಲು ಅವಕಾಶ ಸಿಕ್ಕಿದ್ದು, ಆ ವ್ಯಕ್ತಿಗೆ ನಮ್ಮ ಶಾಸಕರು ಯು.ಟಿ. ಖಾದರ್ ಎಂಬುದು ಹೆಮ್ಮೆಯ ವಿಚಾರ.