‘ಕನಕಶ್ರೀ ಪ್ರಶಸ್ತಿ’ಗೆ ಆಯ್ಕೆಯಾಗಿರುವ ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಅಭಿನಂದನೆ

‘ಕನಕಶ್ರೀ ಪ್ರಶಸ್ತಿ’ಗೆ ಆಯ್ಕೆಯಾಗಿರುವ ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಅಭಿನಂದನೆ


ಮಂಗಳೂರು: ಕರ್ನಾಟಕ ಘನ ಸರಕಾರವು ಕೊಡಮಾಡುವ ಪ್ರತಿಷ್ಠಿತ ‘ಕನಕಶ್ರೀ ಪ್ರಶಸ್ತಿ-2024’ಗೆ ಆಯ್ಕೆಗೊಂಡಿರುವ ಹಿರಿಯ ವೇದವಿದ್ವಾಂಸರೂ, ಪೇಜಾವರ ಮಠದ ಹಿರಿಯ ಯತಿಗಳಾದ ಹರಿಪಾದಗೈದಿರುವ ವಿಶ್ವೇಶತೀರ್ಥ ಶ್ರೀಪಾದರ ಪರಮಾಪ್ತರೂ, ಈ ಹಿಂದೆ ಮಂಗಳೂರಿನಲ್ಲಿ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ‘ಭಾಗವತ ಸಪ್ತಾಹ’ವನ್ನು ನಡೆಸಿಕೊಟ್ಟಿರುವ, ಭಾರತೀಯ ಸಂಸ್ಕೃತಿ ಪರಂಪರೆ ಕುರಿತ ಪ್ರವಚನಗಳಿಗೆ ಹೆಸರುವಾಸಿಯಾಗಿರುವ ವ್ಯಾಸನಕೆರೆ ಪ್ರಭಂಜನಾಚಾರ್ಯರನ್ನು  ಕಲ್ಕೂರ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಅವರ ಸ್ವಗೃಹ ‘ಪಾಜಕ’ದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿನಂದಿಸಿದರು. 

ಜಯಶ್ರೀ ವ್ಯಾಸನಕೆರೆ ಮತ್ತು ಅವರ ಸೊಸೆ ಶುತಿ ವ್ಯಾಸನಕೆರೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article