24 ಗಂಟೆಯೊಳಗಡೆ ಯಶಸ್ವಿಯಾಗಿ ಮುಗಿದ 15ನೇ ವರ್ಷದ ಪಣಪಿಲ "ಜಯ-ವಿಜಯ" ಕಂಬಳ

24 ಗಂಟೆಯೊಳಗಡೆ ಯಶಸ್ವಿಯಾಗಿ ಮುಗಿದ 15ನೇ ವರ್ಷದ ಪಣಪಿಲ "ಜಯ-ವಿಜಯ" ಕಂಬಳ


ಮೂಡುಬಿದಿರೆ:  ಜಯ-ವಿಜಯ' ಜೋಡುಕರೆ ಕಂಬಳ ಸಮಿತಿ ಪಣಪಿಲ  ಇದರ  ವತಿಯಿಂದ ನಡೆದ ಶನಿವಾರ ಆರಂಭಗೊಂಡ 15ನೇ ವರ್ಷದ ಹೊನಲು ಬೆಳಕಿನ  ಜೋಡುಕರೆ ಕಂಬಳವು ಭಾನುವಾರ ಬೆಳಿಗ್ಗೆ  ಮುಗಿಯುವ ಮೂಲಕ  24 ಗಂಟೆಯೊಳಗಡೆ  ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಕಂಬಳ ಫಲಿತಾಂಶ : 

ಹಗ್ಗ ಕಿರಿಯ ವಿಭಾಗದಲ್ಲಿ 21 ಜತೆ ಕೋಣಗಳು ಭಾಗವಹಿಸಿದ್ದು ಸುರತ್ಕಲ್ ಪಂಚಜನ್ಯ ಯೊಗೀಶ್ ಪೂಜಾರಿ ಎ -ಪ್ರಥಮ ( ಭಟ್ಕಳ ಶಂಕರ್ -ಕೋಣ ಓಡಿಸಿದವರು),  ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ನರಸಿಂಹ ಕೆ.ಶೆಟ್ಟಿ -ದ್ವಿತೀಯ (ಆದಿ ಉಡುಪಿ ಜಿತೇಶ್ ಸುವರ್ಣ - ಕೋಣ ಓಡಿಸಿದವರು).

ನೇಗಿಲು ಕಿರಿಯ ವಿಭಾಗದಲ್ಲಿ 52 ಜತೆ ಕೋಣಗಳು ಭಾಗವಹಿಸಿದ್ದು ಮೂಲ್ಕಿ ಚಿತ್ರಾಪು ಸಾನದ ಮನೆ ಅಂಬಿಕಾ ರವೀಂದ್ರ ಪೂಜಾರಿ ಎ- ಪ್ರಥಮ (ಬಂಬ್ರಾಣಬೈಲು ವಂದಿತ್ ಶೆಟ್ಟಿ - ಕೋಣ ಓಡಿಸಿದವರು), ಪಣೋಲಿಬೈಲು ಬೊಳ್ಳಾಯಿ ಚಂದಪ್ಪ ಪೂಜಾರಿ - ದ್ವಿತೀಯ ( ಪಡು ಸಾಂತೂರು ಸುಕೇಶ್ ಪೂಜಾರಿ : ಕೋಣ ಓಡಿಸಿದವರು).

ನೇಗಿಲು ಸಬ್ ಜ್ಯೂನಿಯರ್ ವಿಭಾಗದಲ್ಲಿ 92 ಜತೆ ಕೋಣಗಳು ಭಾಗವಹಿಸಿದ್ದು ಮುಡಾರು ಹಚ್ಚೊಟ್ಟು  ಫ್ಲೋರಾ ನಿವಾಸ ರೋಶನ್ ರಂಜಿತ್ ಫೆರ್ನಾಂಡಿಸ್ -ಪ್ರಥಮ ( ಕಕ್ಯಪದವು ಮಹಾಮ್ಮಾಯಿ ಗೌತಮ್ ಗೌಡ: ಕೋಣ ಓಡಿಸಿದವರು), ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ- ದ್ವಿತೀಯ ( ಬೈಂದೂರು ಮಂಜುನಾಥ ಗೌಡ- ಕೋಣ ಓಡಿಸಿದವರು).

ಕಂಬಳ ಕೂಟದಲ್ಲಿ ಸುಮಾರು 163 ಜೊತೆ ಕೋಣಗಳು ಭಾಗಿಯಾಗಿದ್ದವು.

ಬಹುಮಾನ ವಿತರಣಾ  ಕಾರ್ಯಕ್ರಮದಲ್ಲಿ ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ, ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಬಿ ಅಳಿಯೂರು, ದರೆಗುಡ್ಡೆ ಪಂಚಾಯತ್ ಸದಸ್ಯರಾದ ಮುನಿರಾಜ್ ಹೆಗ್ಡೆ, ಕೆ ಸಂತೋಷ್ ಪೂಜಾರಿ, ದರಗುಡ್ಡೆ ಪಂಚಾಯತ್ ಗ್ರಾಮಕರಣಿಕ ಕಿಶೋರ್ ಕುಮಾರ್, ವಿಎಸ್ ಆರೆಂಜರ್ಸ್ನ ಮಾಲಕರಾದ  ರಮನಾಥ ಸಾಲ್ಯಾನ್, ಕಂಬಳ ಸಮಿತಿಯ ಅಧ್ಯಕ್ಷ  ಯುವರಾಜ್ ಹೆಗ್ಡೆ ನಂದೊಟ್ಟು, ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಪಾಲನ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಕಂಗಿನ ಮನೆ, ಕಂಬಳ ಸಮಿತಿಯ ಕಾರ್ಯಧ್ಯಕ್ಷ ಸುಭಾಷ್ ಚಂದ್ರ ಚೌಟ,

ಸರಕಾರಿ ಪ್ರಾಥಮಿಕ ಶಾಲೆ ಪಣಪಿಲ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಪೂಜಾರಿ, ಶ್ರೀ ಇಟಲ ಗೆಳೆಯರ ಬಳಗದ ಅಧ್ಯಕ್ಷ ಸದಾನಂದ ಪೂಜಾರಿ ಉಮಿಲುಕ್ಕು ಮತ್ತಿತರರು ಉಪಸ್ಥಿತರಿದ್ದರು. 

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಅಶ್ವತ್ ಪಣಪಿಲ  ಸ್ವಾಗತಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article