
ಉಡುಪಿ-ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
Sunday, November 10, 2024
ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾ.ಹೆ. 66ರ ಅಂಬಾಗಿಲು ಸಮೀಪದ ಉಡುಪಿ-ಪುತ್ತೂರಿನಲ್ಲಿರುವ ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ(ಎಲ್.ವಿ.ಟಿ) ಸನ್ನಿಧಿಯಲ್ಲಿ ವರ್ಷಂಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ಪಕ್ಷಿ ಜಾಗರಣೆ ಪೂಜೆ ಪ್ರಯುಕ್ತ ನ.10 ರಂದು ಮುಂಜಾನೆ 5 ಸಾವಿರ ಹಣತೆಗಳ ದೀಪ ಬೆಳಗಿಸಿ ವಿಶ್ವರೂಪ ದರ್ಶನ ನಡೆಯಿತು.
ದೇವಳದ ಅರ್ಚಕರಾದ ರಾಘವೇಂದ್ರ ಭಟ್ ಮತ್ತು ಶ್ರೀನಿವಾಸ್ ತಂತ್ರಿಗಳು ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ ಹಾಗೂ ಮಹಾ ಪೂಜೆ ನೆರವೇರಿಸಿದರು. ಸಮಾಜ ಬಾಂಧವರಿಂದ ಬೆಳಿಗ್ಗೆ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ಮತ್ತು ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಹೊರಾಂಗಣದಲ್ಲಿ ರಚಿಸಿದ ಸುಮಾರು 15 ಅಡಿ ಉದ್ದದ ವರಾಹ ಅವತಾರ ಮಾದರಿಯ ವಿಶೇಷ ರಂಗೋಲಿ ಗಮನ ಸೆಳೆಯಿತು.