ಬಾವಿಗೆ ಬಿದ್ದ ಚಿರತೆ: ಅರಣ್ಯಾಧಿಕಾರಿಗಳಿಂದ ರಕ್ಷಣೆ
Monday, November 11, 2024
ಶಿರ್ವ: ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯ ಅರ್ಕುಳ ಪರಾಡಿ ದರ್ಕಾಸು ಮನೆಯ ನಿವಾಸಿ ಪಿಲೋಮಿನಾ ಎಂಬವರ ಮನೆಯ ಬಾವಿ ದಂಡೆಯಲ್ಲಿದ್ದ ಕೋಳಿ ಹಿಡಿಯಲು ಹಾರಿದ ಚಿರತೆ ಆಯ ತಪ್ಪಿ ಬಾವಿಗೆ ಬಿದ್ದ ಘಟನೆ ಭಾನುವಾರ ನಡೆದಿದೆ. ಮನೆಯವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಇಲಾಖಾ ಸಿಬ್ಬಂದಿಗಳು ಬಲೆ ಬೀಸಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಈ ಕಾರ್ಯದಲ್ಲಿ ಎಸಿಎಫ್ ಪಿ. ಶ್ರೀಧರ್, ಆರ್‌ಎಫ್‌ಒ ಪ್ರಭಾಕರ ಕುಲಾಲ್, ಉಪ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ, ಸಿಬ್ಬಂಧಿಗಳಾದ ಪ್ರಕಾಶ್, ಸುರೇಶ್, ಮಂಜುನಾಥ್,ಮಹಂತೇಶ್, ಅಖಿಲೇಶ್, ಅರಣ್ಯ ವೀಕ್ಷಕರಾದ ಬಾಬು, ಶಮೀಮ್, ವಿಜೇತ್ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಬೆಳ್ಮಣ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂದೀಪ್ ಪೂಜಾರಿ, ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ, ಮನೆಯವರು ಉಪಸ್ಥಿತರಿದ್ದರು.