ಬೀದಿ ಬದಿ ವ್ಯಾಪಾರ ವಲಯ: ಬುಧವಾರದಿಂದ ಕಾರ್ಯಾರಂಭ

ಬೀದಿ ಬದಿ ವ್ಯಾಪಾರ ವಲಯ: ಬುಧವಾರದಿಂದ ಕಾರ್ಯಾರಂಭ


ಮಂಗಳೂರು: ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ನಿರ್ಮಾಣವಾಗಿರುವ ಬೀದಿ ಬದಿ ವ್ಯಾಪಾರ ವಲಯವು ಬುಧವಾರದಿಂದ ಕಾರ್ಯಾರಂಭವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದರು. 

ಅವರು ಸ್ಟೇಟ್‌ಬ್ಯಾಂಕ್‌ನ ಬೀದಿ ಬದಿ ವ್ಯಾಪಾರಸ್ಥರಿಗಾಗಿ ನಿಮಿ೯ಸಲಾಗಿರುವ ವಲಯಕ್ಕೆ ಇಂದು ಭೇಟಿ ನೀಡಿ ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಟೋನ್ಮೆಂಟ್ ವಾರ್ಡ್‌ನಲ್ಲಿ ಸುಸಜ್ಜಿತವಾಗಿ ಬೀದಿ ಬದಿ ವ್ಯಾಪಾರ ವಲಯವು ನಿರ್ಮಾಣಗೊಂಡಿದೆ. ಇದ್ರಲ್ಲಿ 130 ಮಂದಿ ಪೈಕಿಯಲ್ಲಿ ಈಗಾಗ್ಲೇ 93 ಮಂದಿ ಜನರಿಗೆ ಕಾರ್ಡ್ ಗಳನ್ನು ವಿತರಿಸಲಾಗಿದೆ. ಬುಧವಾರದಿಂದ ಹಣ್ಣುಹಂಪಲು, ಫ್ಯಾನ್ಸಿ ಮಳಿಗೆಗಳು ಇಲ್ಲಿ ಕಾರ್ಯಾಚರಿಸಲಿದ್ದು, ಇವ್ರಿಗೆ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ನೀರಿನ ವ್ಯವಸ್ಥೆ ಆದ ಬಳಿಕ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತದೆ. ಜೊತೆಗೆ ಒಂದು ವಾರದ ಬಳಿಕ ಹೂ ಮಾರಾಟದ ಮಳಿಗೆಗಳು ಕಾರ್ಯಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಮಾಜಿ ಮೇಯರ್ ಹಾಗೂ ಸ್ಥಳೀಯ ಕಾಪೋರೇಟರ್ ದಿವಾಕರ್ ಪಾಂಡೇಶ್ವರ್ ಮಾತನಾಡಿ, ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ   

ಕಂಟೋನ್ಮೆಂಟ್ ವಾರ್ಡ್‌ನಲ್ಲಿ ಸುಸಜ್ಜಿತವಾಗಿ ಬೀದಿ ಬದಿ ವ್ಯಾಪಾರ ವಲಯ ಕಾರ್ಯಾರಂಭವಾಗಿದೆ. ಈಗಾಗಲೇ ಸುಸಜ್ಜಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಿಕನ್ ಸ್ಟಾಲ್‌ಗಳ ಕಲುಷಿತ ನೀರನ್ನು ಡ್ರೈನೇಜ್ ಬಿಡುತ್ತಾರೆ, ಇವರಿಗೆ ಈಗಾಗಲೇ ಬಿಡದಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಪ್ರವೀಣ್ ಕುಮಾರ್ ಮಾತನಾಡಿ, ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸುಸಜ್ಜಿತವಾಗಿ ಸ್ಟೇಟ್ ಬ್ಯಾಂಕ್ ಬಳಿ ಬೀದಿ ವ್ಯಾಪಾರ ವಲಯ ನಿರ್ಮಾಣವಾಗಿದೆ. ವ್ಯಾಪಾರಿಗಳ ಅನುಕೂಲಕ್ಕೆ ತಕ್ಕಂತೆ ವಲಯ ನಿರ್ಮಾಣ ಮಾಡಲಾಗಿದ್ದು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ವ್ಯಾಪಾರ ವಲಯ ಕಾರ್ಯಾರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕದ್ರಿ ಮನೋಹರ್ ಶೆಟ್ಟಿ, ವೀಣಾ ಮಂಗಳ, ಅಧಿಕಾರಿಗಳಾದ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article