
ಸಾಲ ಪ್ರಕರಣ: ವಿಶೇಷ ಪ್ರಾರ್ಥನೆ
Saturday, November 9, 2024
ಉಡುಪಿ: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಸಾಲ ನೀಡಿಕೆ ಪ್ರಕರಣ ಹಿನ್ನೆಲೆಯಲ್ಲಿ ಸುಸ್ತಿದಾರರು ಮತ್ತು ಬ್ಯಾಂಕಿನ ಸಿಬಂದಿಗಳು ರಘುಪತಿ ಭಟ್ ಆಡಳಿತ ಮೊಕ್ತೇಸರರಾಗಿರುವ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ನಡೆಸಲುದ್ದೇಶಿಸಿದ್ದ ಆಣೆ ಪ್ರಮಾಣದ ಬದಲಿಗೆ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಕಾನೂನು ರೀತಿಯ ಹೋರಾಟ ನಡೆಸಿ ಪ್ರಕರಣ ಇತ್ಯರ್ಥಪರಿಸುವುದಾಗಿ ತಿಳಿಸಲಾಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶರತ್ ಕುಮಾರ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸುಸ್ತಿದಾರರು ಭಾಗವಹಿಸಿದ್ದರು. ಸುಸ್ತಿದಾರರ ಪರವಾಗಿ ರಘುಪತಿ ಭಟ್ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ದಿವಾಕರ ಐತಾಳ ಪ್ರಾರ್ಥನೆ ನೆರವೇರಿಸಿ ಪೂಜೆ ಸಲ್ಲಿಸಿದರು.
ಮೂರ್ತಿಪೂಜೆ ವಿರೋಧಿಗಳ ಪ್ರಮಾಣ ಒಪ್ಪಲಾಗದು:
ಜೀವಮಾನದುದ್ದಕ್ಕೂ ಹಿಂದುತ್ವ, ಹಿಂದೂಗಳನ್ನು ದ್ವೇಷಿಸುವ ಹಾಗೂ ಗೋಮಾಂಸ ಭಕ್ಷಕರು ಹಿಂದೂ ದೇವಾಲಯಕ್ಕೆ ಬಂದು ಪ್ರಮಾಣ ಮಾಡುತ್ತೇವೆ ಎಂದರೆ ಅದನ್ನು ಒಪ್ಪಲಾಗದು. ನಾನು ದೈವ ದೇವರನ್ನು ನಂಬಿ ಹಿಂದುತ್ವದ ಆಚರಣೆಯಲ್ಲಿದ್ದು, ನಾನು ನಂಬಿದ ತತ್ವ ಸಿದ್ಧಾಂತ ಮೀರಿ ಹೋಗುವುದು ಅಸಾಧ್ಯ. ಮೂರ್ತಿ ಪೂಜೆ ವಿರೋಧಿಸುವವರು ಕರಂಬಳ್ಳಿ ವೆಂಕಟರಮಣ ದೇವರು ಹಾಗೂ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವುದು ಸರಿಯಲ್ಲ ಎಂದು ಯಶಪಾಲ್ ಸುವರ್ಣ ಹೇಳಿದರು.