ಮಕ್ಕಳ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
Friday, December 27, 2024
ಕುಂದಾಪುರ: ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಳು ದಿನ ಶೋಕಾಚರಣೆ ಇರುವುದರಿಂದ ಈ ತಿಂಗಳ 28ರಂದು ಬ್ರಹ್ಮಾವರ ತಾಲೂಕು ಬಾರಕೂರಿನ ಹನೆಹಳ್ಳಿಯ 'ಸಂಕಮ್ಮ ತಾಯಿ ರೆಸಾರ್ಟ್ಸ್'ನಲ್ಲಿ ನಡೆಯಬೇಕಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದ್ದು ಅದು ಜನವರಿ 04, 2025ರ ಶನಿವಾರದಂದು ಅದೇ ಜಾಗದಲ್ಲಿ ಆಮಂತ್ರಣದಲ್ಲಿರುವ ಕಾರ್ಯಕ್ರಮಗಳೊಂದಿಗೆ ವೇಳಾಪಟ್ಟಿಯಂತೆ ನಡೆಯಲಿದೆ ಎಂಬುದಾಗಿ ಸಮ್ಮೇಳನದ ಪ್ರಧಾನ ಸಂಘಟಕರಾಗಿರುವ ರಾಮಭಟ್ಟ ಸಜಂಗದ್ದೆ ತಿಳಿಸಿರುತ್ತಾರೆ.