
ತೋಕೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್
Friday, December 27, 2024
ಮೂಲ್ಕಿ: ದೇಶದ ಆರ್ಥಿಕತೆ ಹರಿಕಾರ ಮೇದಾವಿ ಸಜ್ಜನ ರಾಜಕಾರಣಿ ಮಾಜೀ ಪ್ರಧಾನಿ ದಿ. ಮನಮೋಹನ್ ಸಿಂಗ್ ರವರು ಮುಲ್ಕಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು
ಈ ಸಂದರ್ಭ ಅಂದಿನ ಆಡಳಿತ ಮೊಕ್ತೇಸರ ತೋಕೂರು ಗುತ್ತು ಹೊಸಮನೆ ದಿ. ಗುಣಪಾಲ ಶೆಟ್ಟಿ ಹಾಗೂ ಅಂದಿನ ಪ್ರಧಾನ ಅರ್ಚಕರಾದ ಹರಿ ಭಟ್ ಅವರು ನೀವು ಪ್ರಧಾನಮಂತ್ರಿಯಾಗುತ್ತೀರಿ ಎಂದು ಹಾರೈಸಿದ್ದರು ಎಂದು ತೋಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ ತಿಳಿಸಿದ್ದಾರೆ
ಅಂದಿನ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕಾಂಗ್ರೆಸ್ ನಾಯಕ, ಮಾಜಿ ಮೇಯರ್ ಶಶಿಧರ ಹೆಗ್ಡೆ ಮೊದಲಾದವರಿದ್ದರು.