10 ದಿನಗಳ ಕಾಲ ನೇತ್ರಾವತಿ ಸೇತುವೆ ಮೇಲ್ಭಾಗ ರಸ್ತೆ ಕಾಮಗಾರಿ
Friday, December 20, 2024
ಮಂಗಳೂರು: ಡಿ.19ರಿಂದ ಸುಮಾರು 10 ದಿನಗಳ ಕಾಲ ಮಂಗಳೂರು ನಗರ ವ್ಯಾಪ್ತಿಯ ಉಳ್ಳಾಲದಲ್ಲಿ ನೇತ್ರಾವತಿ ಸೇತುವೆ ಮೇಲ್ಭಾಗ ರಸ್ತೆ ಕಾಮಗಾರಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ನಡೆಯುತ್ತಿದೆ.
ಕೇರಳ, ತಲಪಾಡಿ ಹಾಗೂ ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರದ ಕಡೆಗೆ ವಾಹನಗಳು ಪೀಕ್ ಅವರ್ಗಳಲ್ಲಿ ನೇತ್ರಾವತಿ ಸೇತುವೆ ಕಾಮಗಾರಿ ನಿಮಿತ್ತ ವಾಹನಗಳ ಸಂಚಾರ ನಿಧಾನ ಗತಿಯಲ್ಲಿ ಸಾಗುತ್ತಿದೆ.
ಮಂಗಳೂರು ನಗರ ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಂಚಾರಕ್ಕೆ ತೀರಾ ಅಡಚಣೆಯಾಗುವುದರಿಂದ ಸೇತುವೆಯ ಬಳಿಯ ತೆರೆದ ವಿಭಜಕದ ಮೂಲಕ ಪೂರ್ವ ರಸ್ತೆಯನ್ನು (ಮತ್ತೊಂದು ಕಡೆಯ ರಸ್ತೆಯಲ್ಲಿ) ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರು, ವಾಹನ ಚಾಲಕರು/ಸವಾರರು ಎಚ್ಚರಿಕೆ ವಹಿಸಿ ಸೂಕ್ತ ಸಹಕಾರ ನೀಡುವಂತೆ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ಕೋರಿದ್ದಾರೆ.