10ನೇ ವರ್ಷದ ಸರ್ವಧರ್ಮಗಳ ಕ್ರಿಸ್ಮಸ್ ಹಬ್ಬ

10ನೇ ವರ್ಷದ ಸರ್ವಧರ್ಮಗಳ ಕ್ರಿಸ್ಮಸ್ ಹಬ್ಬ


ಮಂಗಳೂರು: ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜ ಅವರ ನೇತೃತ್ವದಲ್ಲಿ 10ನೇ ವರ್ಷದ ಸರ್ವಧರ್ಮಗಳ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮ ಗುರು ಮೋಸ್ಟ್ ರೇ. ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿ, ಕ್ರಿಸ್ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ, ಪ್ರೀತಿಯನ್ನು ಒಬ್ಬರಿಗೊಬ್ಬರು ಹಂಚುವ ಮೂಲಕ ಸಮಾಜವನ್ನು ಕಟ್ಟಲಿಕ್ಕೆ ಇದು ಒಂದು ಉತ್ತಮವಾದ ಸಂದೇಶ ಎಂದು ಹೇಳಿದರು.

ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡುವುದು ಇಡೀ ಜಗತ್ತಿನಲ್ಲಿ ಯೇಸು ಕ್ರಿಸ್ತನ ಜೀವನ ಪುನಃರುತಾನವನ್ನು ಎಲ್ಲರೂ ಆನಂದಿಸುತ್ತಾರೆ, ಸಂಭ್ರಮಿಸುತ್ತಾರೆ, ಇದರ ಅರ್ಥ ನಾವು ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕು ಸ್ವಾರ್ಥದ ಸಮಾಜದಲ್ಲಿ ಇವತ್ತು ಸ್ವಾರ್ಥವನ್ನು ಬಿಟ್ಟು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಇನ್ನೊಬ್ಬರ ಕಷ್ಟವನ್ನು ಅರಿಯುವ ಮೂಲಕ ತನ್ನನ್ನು ತಾನು ಪ್ರೀತಿಸುವುದರ ಜೊತೆಗೆ ಇನ್ನೊಬ್ಬರನ್ನು ಪ್ರೀತಿಸುವುದು ಕ್ರಿಸ್ಮಸ್ ಹಬ್ಬದ ಪ್ರಮುಖ ಸಂದೇಶ ಎಂಬ ಮಾತನ್ನು ಹೇಳಿದರು.

ಈ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡರಾವ್ ಮಾತನಾಡಿ ಕ್ರಿಸ್ಮಸ್ ಹಬ್ಬ ಆಚರಣೆ ಮಾಡುವುದು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ, ಕರ್ನಾಟಕ ರಾಜ್ಯದಲ್ಲಿ ಮತ್ತು ಈ ನಾಡಿನಲ್ಲಿ ಎಲ್ಲಾ ಧರ್ಮದವರನ್ನು ಸೇರಿಸಿ ಕಳೆದ 9 ವರ್ಷಗಳಿಂದ ಕ್ರಿಸ್ಮಸ್ ಹಬ್ಬವನ್ನು ದೀಪಾವಳಿ ಹಬ್ಬವನ್ನು ರಂಜಾನ್ ಹಬ್ಬವನ್ನು ಐವನ್ ಡಿ’ಸೋಜ ಅವರ ನೇತೃತ್ವದಲ್ಲಿ ಆಚರಣೆ ಮಾಡುವುದು ನಿಜಕ್ಕೂ ಇದೊಂದು ಉತ್ತಮ ಉದಾಹರಣೆ ಮತ್ತು ಎಲ್ಲಾ ಜನರನ್ನು ಸೇರಿಸು ವಂತಹ ಇದೊಂದು ಉತ್ತಮ ಉದಾಹರಣೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಶಾಂತಿ ಪ್ರಕಾಶನ ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಜನಾಬ್ ಮೊಹಮ್ಮದ್ ಕುಂಞಿ ಮಾತನಾಡಿ, ಇಂದಿನ ಪ್ರಸ್ತುತ ಸಮಾಜದಲ್ಲಿ ಐವನ್ ಡಿ’ಸೋಜ ಕ್ರಿಸ್ಮಸ್ ಹಬ್ಬ ಆಚರಣೆ ಮಾಡುವುದು ಮತ್ತು ಸರ್ವ ಧರ್ಮಗಳ ಹಬ್ಬ ಆಚರಣೆ ಮಾಡುವುದು ಅವಶ್ಯಕತೆ ಇದೆ, ಒಬ್ಬರ ದೇವರು ಇನ್ನೊಬ್ಬರ ದೇವರಿಗಿಂತ ಮೇಲು ಎನ್ನುವುದಕ್ಕಿಂತ ತಮ್ಮ ಧರ್ಮವನ್ನು ಆಚರಣೆ ಮಾಡಿ ಪರರ ಧರ್ಮವನ್ನು ಗೌರವಿಸಿ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ, ಇಂತ ಕಾರ್ಯಕ್ರಮಗಳು ಬಹಳ ಶ್ಲಾಘನೀಯ ಮತ್ತು ಇದೊಂದು ಸಮಾಜದ ಪ್ರಗತಿ ಮತ್ತು ಒಟ್ಟುಗೂಡಿಸುವ ಅಂಶ ಎಂದು ಹೇಳಿದರು. 

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಕ್ರಿಸ್ಮಸ್ ಹಬ್ಬವನ್ನು ಬರೆ ಆಚರಣೆ ಮಾಡುವುದು ಮಾತ್ರವಲ್ಲದೆ ತಾವು ಎಲ್ಲರೂ ಪ್ರತಿಜ್ಞೆ ಮಾಡಬೇಕಾದ ಅನಿವಾರ್ಯತೆ ಇದೆ ತಾವು ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ, ಒಟ್ಟಾಗಿ ಸೇರಿಸುತ್ತೇವೆ, ಕಹಿ ಘಟನೆಗಳನ್ನ ನಾವು ಬಿಟ್ಟು ಹೊಸ ಸಮಾಜಕ್ಕೆ ನಾಂದಿ ಹಾಕುತ್ತೇವೆ ಎಂಬುದರ ಬಗ್ಗೆ ತಾವು ಇವತ್ತೇ ಪ್ರತಿಜ್ಞೆ ಮಾಡಬೇಕಾಗಿದೆ ಎಂಬ ಸಂದೇಶವನ್ನು ನೀಡಿದರು. 

ಶಾರದಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ವಿಶ್ವ ಹಿಂದೂ ಪರಿಷತ್ ದಕ್ಷಿಣ ಇದರ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ತಮ್ಮ ಬಾಲ್ಯದ ನೆನಪುಗಳನ್ನ ಅವರು ಮೆಲುಕು ಹಾಕಿದರು, ತಾನು ಹುಟ್ಟಿದಂತಹ ಊರಿನಲ್ಲಿ ನನ್ನ ಮನೆಗೆ ಎಲ್ಲರೂ ಬಂದು ನಾವೆಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದು, ತನ್ನ ನೆನಪು ಇನ್ನೂ ಆಚರಿಯಲ್ಲಿ ಉಳಿದಿದೆ, ನಾವೆಲ್ಲರೂ ಒಂದಾಗಿ ಇರಬೇಕು, ಇವತ್ತು ಎಲ್ಲಾ ಧರ್ಮಗಳನ್ನು ಗೌರವಿಸುವಂತಹ ಭಾರತ ದೇಶ ನಮ್ಮದು, ಎಲ್ಲಾ ಧರ್ಮಗಳನ್ನು ಒಟ್ಟಾಗಿ ಆಚರಣೆ ಮಾಡಿದಾಗ ಅದು ನಮ್ಮ ದೇಶದ ಪ್ರಗತಿಯು ಮುನ್ನಡೆಯುತ್ತದೆ ಎಂದು ಹೇಳಿದರು.

ಶ್ರೀ ಗುರು ಸಿಂಗ್ ಸಭಾ ಸೊಸೈಟಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ರಾಥೋರ್ ಮಾತನಾಡಿ, ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡುವ ಈ ಸಂದರ್ಭದಲ್ಲಿ ನಮ್ಮನ್ನು ಸೇರಿಸಿ ಎಲ್ಲಾ ಸಮುದಾಯದವರನ್ನು ಸೇರಿಸಿ ಆಚರಣೆ ಮಾಡುವುದು ನನಗೊಂದು ಹೊಸ ಅನುಭವ, ಮತ್ತು ಸೇರಿದಂತಹ ಜನರು ಮತ್ತು ನಡೆಯುವಂತಹ ಕಾರ್ಯಕ್ರಮಗಳು ನಿಜವಾಗಿ ಶ್ಲಾಘನೀಯ ಎಂದು ಶುಭ ಹಾರೈಸಿದರು. 

ಅದೇ ರೀತಿ ಈ ಕಾರ್ಯಕ್ರಮ ಸುಮಾರು 6 ಗಂಟೆಗಳ ಕಾಲ ನಡೆದಿತ್ತು, ಕಾರ್ಯಕ್ರಮದಲ್ಲಿ ವಿವಿಧ ವಿನೋದಾವಳಿ ನಡೆದವು, ಕ್ರಿಸ್ಮಸ್ ಪರವಾಗಿ ಕ್ರಿಸ್ಮಸ್ ಕ್ಯಾರಲ್ ಮತ್ತು ವೆರೈಟಿ ಸ್ಪರ್ಧೆಗಳು ನಡೆದಿದ್ದು, ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಬೇರೆ ಸಂಸ್ಥೆಗಳಿಂದ ಭಾಗವಹಿಸಿ ಸಂಭ್ರಮವನ್ನು ಆಚರಿಸಿದರು.

ಮಾಜಿ ಕೇಂದ್ರ ಸಚಿವರಾದ ದಿ. ಆಸ್ಕರ್ ಫರ್ನಾಂಡಿಸ್ ರವರ ಧರ್ಮಪತ್ನಿ ಬ್ಲೋಸಮ್ ಫರ್ನಾಂಡಿಸ್, ಉಳ್ಳಾಲ ಪೆರ್ಮನೂರು ಚರ್ಚಿನ ಧರ್ಮಗುರು ಸಿಪ್ರಿಯಾನ್ ಪಿಂಟೋ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ,ಮಾಜಿ ಸಚಿವರಾದ ಬಿ ರಮಾನಾಥ್ ರೈ, ದ ಕ ಕಾಂಗ್ರೆಸ್ ಅಧ್ಯಕ್ಷರಾದ ಕೆ ಹರೀಶ್ ಕುಮಾರ್, ಎ ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎ.ಜೆ. ಶೆಟ್ಟಿ, ಯನೊಪೊಯ ಸಂಸ್ಥೆಗಳ ಅಧ್ಯಕ್ಷರಾದ ಯನೊಪೊಯ ಅಬ್ದುಲ್ಲಾ ಕುಂಞಿ, ಮಾಜಿ ಐ.ಎ.ಎಸ್ ಅಧಿಕಾರಿ ವಿನ್ಸೆಂಟ್ ರಿಚರ್ಡ್ ಡಿಸೋಜಾ, ಅಸಿಸ್ಟೆಂಟ್ ಕಮಿಷನರ್ ಹರ್ಷವರ್ಧನ್ ಎಸ್.ಜೆ, ಅಪಾರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್,  ಮಂಗಳೂರು ತಾಲೂಕು ತಹಸಿಲ್ದಾರ್ರಾದ ಪ್ರಶಾಂತ್ ಪಾಟಿಲ್, ಪ್ರದೀಪ್ ಕುಮಾರ್,  ಕಲ್ಕೂರ, ಜಯರಾಮ್ ಶೇಖ, ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮಾಜಿ ಮೂಡ ಅಧ್ಯಕ್ಷರಾದ ಇಬ್ರಾಹಿಂ ಕೊಡಿಜಾಲ್, ಪದ್ಮರಾಜ್ ರಾಮಯ್ಯ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಆಲ್ವರೀಸ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಯು.ಹೆಚ್. ಉಮರ್, ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರದ ಅನಿಲ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಮೋಯ್ಲಿ, ನಗರ ಪಾಲಿಕೆಯ ಸದಸ್ಯರುಗಳಾದ ಪ್ರವೀಣ್ ಚಂದ್ರ ಆಳ್ವ, ಜೀನತ್ ಸಂಶುದ್ದೀನ್, ಸಂಶುದ್ದೀನ್ ಕುದ್ರೋಳಿ, ಕೇಶವ ಮರೊಲಿ, ಅಶ್ರಫ್ ಬಜಾಲ್, ಎಸಿ ವಿನಯ್ ರಾಜ್, ತನ್ವೀರ್ ಶಾ, ಸತೀಶ್ ಪೆಂಗಲ್, ತನ್ವೀರ್ ಶಾ, ಚೇತನ್ ಉರ್ವ, ಸುರೇಂದ್ರ ಕಂಬಳಿ, ಶಾಹುಲ್ ಹಮೀದ್ ಕೆ.ಕೆ., ಡಾ. ರಾಮಚಂದ್ರ, ಬ್ಲಾಕ್ ಅಧ್ಯಕ್ಷರುಗಳಾದ ಸಲೀಂ, ಪ್ರಕಾಶ್ ಬಿ. ಸಾಲಿಯಾನ್, ಹೇಮನಾಥ್ ಶೆಟ್ಟಿ ಪುತ್ತೂರು, ಕಾಂಗ್ರೆಸ್ ಪಕ್ಷದ ನಾಯಕರುಗಳು, ಸಮಾಜದ ಗಣ್ಯ ವ್ಯಕ್ತಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. 

ಐವನ್ ಡಿಸೋಜ ಸ್ವಾಗತಿಸಿದರು. ನಾಗೇಂದ್ರ ಕುಮಾರ್ ಜಪ್ಪಿನಮೊಗರು ವಂದಿಸಿ, ಲಕ್ಷ್ಮೀಶ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article