ಶಕ್ತಿ ವಸತಿ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್-2024

ಶಕ್ತಿ ವಸತಿ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್-2024


ಮಂಗಳೂರು: ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು ಡೈನಾಮಿಕ್ ಸ್ಕೂಲ್ ಅವಾರ್ಡ್-2024ನ್ನು ಡಿ.10 ರಂದು ಬೆಂಗಳೂರಿನ ದಿ ತಾಜ್‌ನಲ್ಲಿ ಎಜ್ಯುಕೇಶನ್ ಟುಡೇ ಆಯೋಜಿಸಿದ್ದ ಕೆ 12 ಲೀಡರ್‌ಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡ್ಸ್ ಸಮಾರಂಭದಲ್ಲಿ ಸ್ವೀಕರಿಸಿದರು.

ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ಕೆ 12 ಲೀಡರ್‌ಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡ್ಸ್‌ನ 12ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಶಕ್ತಿ ವಸತಿ ಶಾಲೆಗೆ ‘ಡೈನಾಮಿಕ್ ಸ್ಕೂಲ್ ಅವಾರ್ಡ್-2024’ ಎಂಬ ಪ್ರತಿಷ್ಠಿತ ಮಾನ್ಯತೆ ಪ್ರಶಸ್ತಿ ದೊರೆತಿದೆ. 

ಈ ಸಮ್ಮೇಳನದಲ್ಲಿ ಭಾರತದಾದ್ಯಂತ ಮುನ್ನೂರಕ್ಕೂ ಹೆಚ್ಚು ಪ್ರಾಂಶುಪಾಲರು, ನಿರ್ದೇಶಕರು ಹಾಗೂ ಖ್ಯಾತ ಶಿಕ್ಷಣತಜ್ಞರು ಭಾಗವಹಿಸಿದ್ದರು. ಬಬಿತಾ ಸೂರಜ್ ಅವರು ವಿವಿಧ ಶಿಕ್ಷಣ ಕ್ಷೇತ್ರಗಳ ಜನಪ್ರಿಯ ಶಿಕ್ಷಣತಜ್ಞರು ಪ್ರಾರಂಭಿಸಿದ ಪ್ಯಾನೆಲ್ ಚರ್ಚೆಗಳಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್. ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್. ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article