ಚಿನ್ನಾಭರಣಗಳನ್ನು ಪಡೆದು ಮಹಿಳೆಯಿಂದ ವಂಚನೆ

ಚಿನ್ನಾಭರಣಗಳನ್ನು ಪಡೆದು ಮಹಿಳೆಯಿಂದ ವಂಚನೆ

ಮುಲ್ಕಿ: ಕಿನ್ನಿಗೋಳಿಯ ಮಹಿಳೆಯೊಬ್ಬರು ತನಗೆ ಹಣಕಾಸಿನ ಸಮಸ್ಯೆ ಇದೆ ಎಂದು ನಂಬಿಸಿ ಇನ್ನೋರ್ವ ಮಹಿಳೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದು ಹಿಂದಿರುಗಿಸದೆ ವಂಚನೆ ಮಾಡಿ ಪರಾರಿಯಾದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಸ್ಥಳೀಯ ನಿವಾಸಿ ರಶ್ಮಿ ರೀಟಾ ಪಿಂಟೋ ಎಂದು ಗುರುತಿಸಲಾಗಿದೆ.

ಆರೋಪಿ ರಶ್ಮಿ ರೀಟಾ ಪಿಂಟೋ ಅವರು ಕಳೆದ ಫೆಬ್ರವರಿ 26ರಂದು ದೂರುದಾರ ಮಹಿಳೆಯ ಮನೆಗೆ ಬಂದು ತನಗೆ ಹಣಕಾಸಿನ ಸಮಸ್ಯೆ ಇರುವುದಾಗಿ ತಿಳಿಸಿ ಬಾವನತ್ಮಾಕ ಪ್ರಭಾವ ಬೀರಿ ನಂಬಿಸಿ 1 ತಿಂಗಳಿನಲ್ಲಿ ಹಿಂತಿರುಗಿಸುವುದಾಗಿ ತಿಳಿಸಿ ದೂರುದಾರ ಮಹಿಳೆಯಿಂದ ಮುಕ್ಕಾಲು ಪವನಿನ ಕರಿಮಣಿ ಸರ-1, ಮುಕ್ಕಾಲು ಪವನಿನ ಬ್ರಾಸ್ ಲೈಟ್-1, 2 ಪವನಿನ ಬಳೆ-1, ಅರ್ಧ ಪವನಿನ ಕಿವಿ ಒಲೆ-1 ಜೊತೆ, ಅರ್ಧ ಪವನಿನ ಜುಮುಕಿ-1 ಜೊತೆ, 1 ವರೆ ಪವನಿನ ಬ್ರಾಸ್ ಲೈಟ್-1, 2 ಪವನಿನ ಬ್ರಾಸ್ ಲೈಟ್-1, 1 ವರೆ ಪವನಿನ ಬ್ರಾಸ್ ಲೈಟ್-1, ತೆಗೆದುಕೊಂಡು ಹೋಗಿ ವಾಪಸ್ ಹಿಂತಿರುಗಿಸದೆ ಅಭರಣಗಳನ್ನು ಕಿನ್ನಿಗೋಳಿಯ ಪೆಡರಲ್ ಬ್ಯಾಂಕ್‌ನಲ್ಲಿ 3ಲಕ್ಷ ರೂ.ಗಳಿಗೆ ಅಡಮಾನ ಇರಿಸಿ ದೂರುದಾರ ಮಹಿಳೆಗೆ ಮೋಸ ಮಾಡಿ ಅಪರಾಧಿಕ ನಂಬಿಕ ದ್ರೋಹ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article