ಶಾಸಕರಿಗೆ 3 ಲಕ್ಷ ಸಂಬಳ-3 ಸಾವಿರದಲ್ಲಿ ಬದುಕುವ ತಾಯಂದಿರ ಬಗ್ಗೆ ಯಾಕೆ ಮೌನ: ಸಿಐಟಿಯು ಬಿ.ಎಂ ಭಟ್ ಪ್ರಶ್ನೆ

ಶಾಸಕರಿಗೆ 3 ಲಕ್ಷ ಸಂಬಳ-3 ಸಾವಿರದಲ್ಲಿ ಬದುಕುವ ತಾಯಂದಿರ ಬಗ್ಗೆ ಯಾಕೆ ಮೌನ: ಸಿಐಟಿಯು ಬಿ.ಎಂ ಭಟ್ ಪ್ರಶ್ನೆ


ಪುತ್ತೂರು: ವಿಧಾನಸಭಾ ಕಲಾಪದಲ್ಲಿ ಕೆಲ ಶಾಸಕರ ಮನೋಸಂಸ್ಕೃತಿ ಬಯಲಾಗುತ್ತಿದೆ. ಕೊಲ್ಲುವ, ಯಾರ್‍ಯಾರದೋ ಸಿಡಿ ಬಗ್ಗೆ ಮಾತನಾಡುತ್ತಾ ಪರಸ್ಪರ ದೋಷಾರೋಪಣೆಗೆ ಮುಂದಾಗುತ್ತಾರೆ. ಆದರೆ ತಪ್ಪಿಯೂ ಇವರಿಂದ ಬದುಕುವ ಸುದ್ದಿ ಚರ್ಚೆಯಾಗುತ್ತಿಲ್ಲ. ತಮಗೆ 3 ಲಕ್ಷ ಸಂಬಳ ಬೇಕು ಎನ್ನುವ ಈ ಜನಪ್ರತಿನಿಧಿಗಳು 3 ಸಾವಿರದಲ್ಲಿ ಬದುಕುವ ತಾಯಂದಿರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸಿಐಟಿಯು ಮುಂಖಡ ಬಿ.ಎಂ.ಭಟ್ ಪ್ರಶ್ನಿಸಿದ್ದಾರೆ. 

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಷರದಾಸೋಹ ನೌಕರರ ಸಂಗದ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದ ಅಮರ್‌ಜವಾನ್ ಸ್ಮಾರಕ ಜ್ಯೋತಿ ಬಳಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. 

ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಬಿಸಿಯೂಟ ನೌಕರರಿಗೆ ರೂ.೬ ಸಾವಿರ ಗ್ಯಾರಂಟಿ ಕೊಟ್ಟಿದ್ದರು. ಆದರೆ ಈತನಕ ಈ ಗ್ಯಾರಂಟಿ ಬಂದಿಲ್ಲ. ಕೇಂದ್ರ ಸರ್ಕಾರ ನಯಾ ಪೈಸೆ ಏರಿಕೆ ಮಾಡಿಲ್ಲ. ವಿಧಾನಸಭೆಯಲ್ಲಿ ಯಾವ ಶಾಸಕರೂ ಈ ತಾಯಂದಿರ ಬಗ್ಗೆ ಮಾತನಾಡುತ್ತಿಲ್ಲ. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರಿಗೆ ಆನೆ ಕೊಲ್ಲುವ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಕನಿಷ್ಟ ಹಣದಲ್ಲಿ ಬದುಕುತ್ತಿರುವ ಬಿಸಿಯೂಟ ನೌಕರರ ಬಗ್ಗೆ ಮಾತನಾಡಲು ಆಗುತ್ತಿಲ್ಲ. ನಿಮಗೆ ತಾಕತ್ತಿದ್ದರೆ ಜನಪ್ರತಿನಿಧಿಗಳೇ ತಿಂಗಳಿಗೆ 3 ಸಾವಿರದಲ್ಲಿ ನೀವೊಮ್ಮೆ ಬದುಕಿ ತೋರಿಸಿ ಎಂದು ಸವಾಲು ಹಾಕಿದರು. 

ಸಿಐಟಿಯು ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ ಸತೀಶನ್, ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಲತಾ ಏಕತ್ತಡ್ಕ, ಕಾರ್ಯದರ್ಶಿ ರಂಜಿತಾ, ಸಂಘಟಕಿ ಲೀಲಾವತಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಲೋನ್ಸಿ, ಕಡಬದ ಅಧ್ಯಕ್ಷೆ ರೇವತಿ, ಸುಲೋಚನಾ, ಹೇಮಾವತಿ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು.

ಬೇಡಿಕೆಗಳು:

ಅಕ್ಷರ ದಾಸೋಹ ನೌಕರರ ವೇತನ ಮಾಸಿಕ ರೂ.26 ಸಾವಿರ ನೀಡಬೇಕು, ನಿವೃತ್ತಿ ಆದವರಿಗೆ ನೀಡಬೇಕಾದ ಇಡುಗಂಟು ತಕ್ಷಣ ಬಿಡುಗಡೆಗೊಳಿಸಬೇಕು, ನಿವೃತ್ತಿಯಾದ ಬಿಸಿಯೂಟ ನೌಕರರಿಗೆ ಮಾಸಿಕ ರೂ.10 ಸಾವಿರ ಪಿಂಚಣಿ ನೀಡಬೇಕು. ಅಕ್ಷರದಾಸೋಹ ನೌಕರರನ್ನು ಸರಕಾರಿ ಡಿ ಗ್ರೂಪ್ ನೌಕರರೆಂದು ಮಾನ್ಯ ಮಾಡಬೇಕು, 12 ತಿಂಗಳೂ ಸಂಬಳ ನೀಡಬೇಕು ಮತ್ತಿತರ ಸಹಿತ 31 ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪುತ್ತೂರು, ಕಡಬ ಬೆಳ್ತಂಗಡಿ ತಾಲೂಕಿನ ಅಕ್ಷರದಾಸೋಹ ನೌಕರರು ಪ್ರತಿಭಟನೆ ನಡೆಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article