
ವಾಹನ ಸಂಚಾರದಲ್ಲಿ ಬದಲಾವಣೆ
Tuesday, December 17, 2024
ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ವಾಹನ ಸವಾರರು ಉಡುಪಿಗೆ ಪ್ರಯಾಣಿಸುವಾಗ ಅಂಬಲಪಾಡಿಯಿಂದ ಸರ್ವಿಸ್ ರಸ್ತೆ ಮೂಲಕ ಅದಿವುಡುಪಿ ಕರಾವಳಿ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ತೆರಳಬೇಕು
ಹಾಗೆಯೇ ಉಡುಪಿಯಿಂದ ಅಂಬಲಪಾಡಿಗೆ ತೆರಳುವವರು ಬ್ರಹ್ಮಗಿರಿಯಿಂದ ಅಂಬಲಪಾಡಿ ಸರ್ವಿಸ್ ರಸ್ತೆ ಮೂಲಕ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿಯಿಂದ ಯು ಟರ್ನ್ ಪಡೆದು ಅಂಬಲಪಾಡಿಗೆ ಹೋಗಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.