ಜ.19 ರಿಂದ ಮಕ್ಕಳಿಗಾಗಿ ಉಚಿತ ಹೃದ್ರೋಗ ಚಿಕಿತ್ಸಾ ಶಿಬಿರ

ಜ.19 ರಿಂದ ಮಕ್ಕಳಿಗಾಗಿ ಉಚಿತ ಹೃದ್ರೋಗ ಚಿಕಿತ್ಸಾ ಶಿಬಿರ

ಮಂಗಳೂರು: ಬೋಳೂರಿನಲ್ಲಿರುವ ಅಮೃತಾನಂದಮಯಿ ಮಠದಲ್ಲಿ ಜ.19ರಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ 18 ವರ್ಷದ ಒಳಗಿನ ಮಕ್ಕಳಿಗಾಗಿ ಹೃದ್ರೋಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಶಸ್ತ್ರಚಿಕಿತ್ಸಾ ಸೇವಾ ಶಿಬಿರ ಆಯೋಜಿಸಲಾಗಿದೆ.

ಕೇರಳದ ಕೊಚ್ಚಿಯ ಅಮೃತಾ ಆಸ್ಪತ್ರೆಯ ಮಕ್ಕಳ ಹೃದಯರೋಗ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ. ಅಗತ್ಯವಿರುವವರನ್ನು ಗುರುತಿಸಿ ಕೇರಳದ ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯಲ್ಲಿ ಉಚಿತವಾಗಿ ಶಸಚಿಕಿತ್ಸೆ ನಡೆಸಲಾಗುವುದು ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವೈದ್ಯಕೀಯ ಸೇವಾ ವಿಭಾಗದ ಡಾ.ದೇವಿಪ್ರಸಾದ್ ಎಸ್.ಹೆಜಮಾಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳ ಬಡಜನತೆಯ ಪ್ರಯೋಜನಕ್ಕಾಗಿ ಶಿಬಿರ ಆಯೋಜಿಸಲಾಗಿದೆ. ಶಿಬಿರಕ್ಕೆ ಬರಲು ಅನುಕೂಲವಾಗುವಂತೆ ಜ.19ರಂದು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೋಳೂರಿನ ಅಮೃತಾನಂದಮಯಿ ಮಠದವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಗ್ಗಿನ ಉಪಹಾರ ಮತ್ತು ಭೋಜನದ ವ್ಯವಸ್ಥೆ ಕೂಡ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಡಜನತೆಗೆ ಇದರ ಚಿಕಿತ್ಸೆ ದೊಡ್ಡ ಹೊರೆಯಾಗುತ್ತಿದೆ. ಹಾಗಾಗಿ ಉಚಿತ ಶಿಬಿರ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್, ಗೌರವಾಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ, ಡಾ.ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article