
ಹೃದಯಾಘಾತದಿಂದ ಸಾವನ್ನು ತಪ್ಪಿಸಲು ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆ ಉತ್ತಮ: ಡಾ. ಸಿ.ಎನ್. ಮಂಜುನಾಥ್
ಮಂಗಳೂರು: ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಎಜಿಯೋಪ್ಲಾಸ್ಟ್ ಮತ್ತು ಎಂಜಿಯೋಗ್ರಾಂ ಚಿಕಿತ್ಸೆ ನೀಡುತ್ತಿದ್ದು, ಇದಕ್ಕಿಂದ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆ ಉತ್ತಮ ಎಂದು ಸಂಸದ, ಜಯದೇವ್ ಆಸ್ಪತ್ರೆಯ ಕಾಡ್ರಿಯಲಜಿಸ್ಟ್ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಸ್ಪೆಕ್ಟ್ರಮ್-2024’ 14ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆಯಲ್ಲಿ ಶೇ.30 ರಷ್ಟು ಜನರು ಹೃದಯಾಘಾತದಿಂದ ಮತ್ತು ಬ್ರೈನ್ ಸ್ಟ್ರೋಕ್‌ನಿಂದ 45 ವರ್ಷದ ಕೆಲಗಿನ ಜನರು ಮೃತಪಡುತ್ತಿದ್ದು, ಇದರಲ್ಲಿಯೂ ನಗರ ಪ್ರದೇಶದಲ್ಲಿ ಶೇ.15 ರಷ್ಟು ಮಂದಿ ಮೃತಪಟ್ಟರೆ, ಗ್ರಾಮೀಣ ಪ್ರದೇಶದಲ್ಲಿ ಶೇ.22 ರಷ್ಟು ಜನರು ಮೃತಪಡುತ್ತಿದ್ದಾರೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ 2 ವರ್ಷಗಳ ಹಿಂದೆ 45 ತಾಲೂಕು ಆಸ್ಪತ್ರೆಗಳಲ್ಲಿ ಹಬ್ ಆಡ್ ಸ್ಪೋಕ್ ಮಾದರಿ ಚಿಕಿತ್ಸೆಯನ್ನು ತೆರೆದಿದ್ದು, ಈ ವರ್ಷ 90ಕ್ಕೆ ಏರಿಸಲು ಯೋಜನೆ ರೂಪುಗೊಂಡಿದ್ದು, ಇದರ ಅಡಿಯಲ್ಲಿ 8 ಜಿಲ್ಲೆಗಳು ಬರಲಿವೆ ಎಂದರು.
ನಮ್ಮಲ್ಲಿ ಶೇ.60 ರಷ್ಟು ಜನರು ತಮ್ಮ ಜೀವನ ಶೈಲಿಯಿಂದಾಗಿ ಮೃತಪಡುತ್ತಿದ್ದು, ಹದರಲ್ಲಿಯೂ ಇತ್ತೀಚಿನ ಜನರು ಸ್ಕ್ರೀನ್ ಎಡಿಕ್ಸನ್ ಮತ್ತು ಒಟ್ಟಿ ತನದಿಂದ ಬಳಲುತ್ತಿದ್ದು, ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ನಮ್ಮ ದೇಶದಲ್ಲಿ 60 ಕೋಟಿ ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, 7 ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಪಡೆಯಲು ಆಸ್ಪತ್ರೆಗೆ ಬರುವ ಫಲಾನುಭವಿಗಳು ಎಲ್ಲಾ ರೀತಿಯಲ್ಲಿಯೂ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ ಎಂದು ಭಾವಿಸಿ ಬರುತ್ತಾರೆ ಆದರೆ ಅಲ್ಲಿಯ ಕೆಲವೊಂದು ನಿಯಮಗಳನ್ನು ಕೇಳಿ ಬೇಸರಗೊಳ್ಳುತ್ತಾರೆ. ಸರ್ಕಾರ ಇದರ ನಿಯಮಗಳನ್ನು ಸಡಿಲಗೊಳಿಸಿ, ಈಗ ನೀಡುತ್ತಿರು ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಕೋಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಪ್ರಕಾರ ನಮ್ಮಲ್ಲಿ 1.16 ಕೋಟಿ ಜನರು ಬಿಪಿಎಲ್ ಕಾರ್ಡ್ ಹೊಂದಿದವರಿದ್ದು, ಕೇಂದ್ರ ಸರ್ಕಾರದ ಪ್ರಕಾರ 69 ಲಕ್ಷ ಜನರಿದ್ದಾರೆ ಇದರಲ್ಲಿ ಹೆಚ್ಚಿನವರು ಶ್ರೀಮಂತ ಬಿಪಿಎಲ್ ಕಾರ್ಡ್ ಹೊಂದಿದವರಿದ್ದು, ಅನುಧಿಕೃತವಾಗಿ ಕಾರ್ಡ್ ಹೊಂದಿದವರನ್ನು ಡಿಲಿಟ್ ಮಾಡಬೇಕು. ಹಾಗೆಯೇ ಅನುದಾನ ಹೆಚ್ಚಿಸಬೇಕು. ಇಲ್ಲವಾದಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳದಿದ್ದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಒತ್ತಡವಾಗುತ್ತದೆ ಎಂದ ಅವರು ಸರ್ಕಾರಿ ಆಸ್ಪತ್ರೆಗೆ ಕೊರತೆ ಇರುವ ದಾದಿಯರು, ಸಿಬ್ಬಂದಿಗಳನ್ನು ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಡಾ. ಪ್ರಶಾಂತ್ ಮಾರ್ಲಾ ಹಾಗೂ ಡಾ. ಎ.ಜೆ. ಶೆಟ್ಟಿ ಮಾತನಾಡಿದರು.
ಡಾ. ಬಿ.ವಿ. ಮಂಜುನಾಥ್ ಸ್ವಾಗತಿಸಿ, ಡಾ. ಪ್ರೀತಂ ಆಳ್ವಾ ವಂದಿಸಿದರು.
*ಕ್ಲಿನಿಕಲ್ ಮೆಡಿಸಿನ್ ಮರೆಯಾಗುತ್ತದೆ:
ಕ್ಲಿನಿಕಲ್ ಮೆಡಿಸಿನ್‌ನಲ್ಲಿ ಮುಖ್ಯವಾಗಿ ಮಾತನಾಡಿ, ಮುಟ್ಟು, ಉತ್ತಮ ನೀತಿಯಲ್ಲಿ ನೋಡಿ ಆನಂತರ ಆರೈಕೆ ಮಾಡಲಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ಮೂಲಕ ಚಿಕಿತ್ಸೆ ನೀಡಲು ಪ್ರಾರಂಭವಾಗಿದ್ದು, ಈ ಬೆಳವಣಿಗೆ ಒಳ್ಳೆಯದಲ್ಲ. ಯಾವಾಗಲೂ ನಾವು ರೋಗಿಯನ್ನು ಅರಿತು ಯಾವರೀತಿ ಚಿಕಿತ್ಸೆ ನೀಡಬೇಕು ಎಂದು ನಿರ್ದರಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.
*20030ಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ ಕ್ಷಾಮ:
ಈಗಾಗಲೇ ದೇಶದಲ್ಲಿ 712 ಮೆಡಿಲಕ್ ಕಾಲೇಜುಗಳಿಂದ ಲಕ್ಷಾಂತರ ವೈದ್ಯರು ಪದವಿ ಪಡೆದು ಹೊರಬರುತ್ತಿದ್ದು, ಈಗಾಗಲೇ 16 ಲಕ್ಷ ಅಲೋಕತಿ ಹಾಗೂ 5 ಲಕ್ಷ ಆಯುರ್ವೇದ ಕ್ಷೇತ್ರದಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, 2030ಕ್ಕೆ ವೈದ್ಯಕೀಯ ಪದವಿ ಪಡೆದವರು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕ್ಷಾಮ ಬರಲಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.
*ಒಂದು ವರ್ಷ ಗ್ರಾಮೀಣ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರೆ ನೀಟ್‌ನಲ್ಲಿ ಮಾಕ್ಸ್:
ಎಂಬಿಬಿಎಸ್ ಪದವಿ ಪಡೆಯುವವರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರೆ ಅಂತವರಿಗೆ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವ ವ್ಯವಸ್ಥೆ ಬರಬೇಕು. ಆಗ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಹಾಗೂ ಸರ್ಕಾರಿ ಆಸ್ಪತ್ರೆಗಳು ಬೆಳೆಯಲು ಸಾಧ್ಯ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.