ತುಳು ಅಧ್ಯಯನಕ್ಕೆ ವಿಪುಲ ಅವಕಾಶ: ಧನಂಜಯ ಮೂಡುಬಿದಿರೆ

ತುಳು ಅಧ್ಯಯನಕ್ಕೆ ವಿಪುಲ ಅವಕಾಶ: ಧನಂಜಯ ಮೂಡುಬಿದಿರೆ


ಮೂಡುಬಿದಿರೆ: ತುಳುವಿನ ಬಗ್ಗೆ ಹಿಂಜರಿಕೆಯ ಕಾಲವೊಂದಿತ್ತು. ಇಂದು ತುಳುವಿನ ಬಗ್ಗೆ ಗೌರವ ಪ್ರಾಪ್ತವಾದ ಕಾಲ. ಅಪೂರ್ವ ದಾಖಲೀಕರಣಕ್ಕೆ ಸೂಕ್ಷ್ಮ ಅಧ್ಯಯನಕ್ಕೆ  ವಿಪುಲ ಅವಕಾಶವಿದೆ ಎಂದು ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಹೇಳಿದರು.

ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ತುಳುವಿನಲ್ಲಿ ಬಹು ಭಾಷಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಕುತೂಹಲ ಮತ್ತು ಗೌರವದಿಂದ ನೋಡುವ ಮನೋಭಾವ ಲೇಖಕನಿಗೆ ಅಗತ್ಯ ಎಂದರು.

ಸಂಯೋಜಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಹೃಷಿಕೇಶ್, ತೇಜಸ್, ಅರ್ಚನಾ, ಸಂಚನಾ, ಶ್ರೇಯಸ್, ಪ್ರಿಥ್ವಿಜಾ, ಅನೂಷ ಕ್ರಮವಾಗಿ ನಾಗಬನ, ಅಜಿಲ ಸೀಮೆ, ಕೊರಗ ತನಿಯ, ತುಳುವರ ಆರಾಧನೆ, ಕೋಟಿ, ಚೆನ್ಯಯ ಅವಳಿ ಆರಾಧನೆ, ಆಚರಣಾ ಪದ್ದತಿಯ ಬಗ್ಗೆ ವಿಚಾರ ಮಂಡಿಸಿದರು.

ಪ್ರಾಂಶುಪಾಲ ಡಾ. ಕುರಿಯನ್, ಉಪನ್ಯಾಸಕರಾದ ಡಾ. ಜ್ಯೋತಿ ರೈ, ಹರೀಶ್ ಟಿ.ಜಿ. ಉಪಸ್ಥಿತರಿಸ್ದರು. ಶ್ರೇಯಾಂಕ ಸ್ವಾಗತಿಸಿದರು. ಕೌಶಿಕ್ ವಂದಿಸಿ, ಪ್ರಣಮ್ಯ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article