
‘ಚಂಡಿಕಾ ಹೋಮ’ದಲ್ಲಿ ಶಾಸಕ ಕಾಮತ್ ಭಾಗಿ
Wednesday, January 15, 2025
ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಜ.14 ರಂದು ಮಕರ ಸಂಕ್ರಾಂತಿಯಂದು ಶ್ರೀ ಕ್ಷೇತ್ರದಲ್ಲಿ ಸರ್ವ ಭಕ್ತಾದಿಗಳ ಶ್ರೇಯೋಭಿವೃದ್ಧಿಗಾಗಿ ‘ಚಂಡಿಕಾ ಹೋಮ’ವು ಶ್ರೀ ಕ್ಷೇತ್ರದ ತಂತ್ರಿ ಕುಂಟಾರು ರವೀಶ್ ತಂತ್ರಿಯವರ ನೇತ್ರತ್ವದಲ್ಲಿ ಜರಗಿತು. ಈ ಹೋಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು.
ಬೆಳಿಗ್ಗೆ ಪ್ರಾರ್ಥನೆ, ಪೂಜೆ ಮಧ್ಯಾಹ್ನ ಯಾಗ ಪೂರ್ಣಾಹುತಿ, ಮಹಾಪೂಜೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಆ ಪ್ರಯುಕ್ತ ಅನೇಕ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸರ್ವಮಂಗಳೆ ಶ್ರೀ ಭಗವತಿಮಾತೆಯ ಕೃಪೆಗೆ ಪಾತ್ರರಾದರು.
ಕಾರ್ಪೊರೇಟರ್ ಲೀಲಾವತಿ ಹಾಗೂ ಕುದ್ರೋಳಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ, ಗಣೇಶ್ ಕುಂಟಲ್ಪಾಡಿ, ಸುಜನ್ ದಾಸ್ ಹಾಗೂ ಎಲ್ಲಾ ಅರ್ಚಕ ವೃಂದ, ಗುರಿಕಾರರು ಮಹಿಳಾ ಸಂಘದ ಎಲ್ಲಾ ಸದಸ್ಯೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.