ಸಹಕಾರಿ ಕ್ಷೇತ್ರಕ್ಕೆ ಅಶ್ವತ್ಥ್ ಪಣಪಿಲ ಎಂಟ್ರಿ

ಸಹಕಾರಿ ಕ್ಷೇತ್ರಕ್ಕೆ ಅಶ್ವತ್ಥ್ ಪಣಪಿಲ ಎಂಟ್ರಿ


ಮೂಡುಬಿದಿರೆ: ರಾಜಕೀಯದಲ್ಲಿ ಬಿಜೆಪಿ ಪಕ್ಷದ ಉತ್ತಮ ಕಾಯ೯ಕತ೯ನಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅಶ್ವತ್ಥ್ ಪಣಪಿಲ ಅವರು ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾರೆ.

ನೆಲ್ಲಿಕಾರು ವ್ಯ.ಸೇ.ಸ. ಸಂಘದ ಆಡಳಿತ ಮಂಡಳಿಯ ನಿದೇ೯ಶಕರ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು ಅದರಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪಧಿ೯ಸಿದ್ದ ಅಶ್ವತ್ಥ್ ಪಣಪಿಲ ಸಹಿತ 12 ಮಂದಿ ಆಯ್ಕೆಯಾಗಿದ್ದಾರೆ.


ಅಶ್ವಥ್ ಪಣಪಿಲ, ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಧನಂಜಯ ಆಳ್ವ ಮಾಂಟ್ರಾಡಿ, ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್, ಫ್ರೆಡ್ರಿಕ್ ಪಿಂಟೊ, ಈದು ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ,ಪ್ರೀತಿ, ಲಕ್ಷ್ಮಿ ಅವರು ಗೆಲುವು ಸಾಧಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article