
ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿವಿ ಕಾಲೇಜಿನ ಕ್ಯಾಡೆಟ್‌ಗಳು
Saturday, January 25, 2025
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ, ಎನ್‌ಸಿಸಿ ನೌಕಾದಳದ ಕೆಡೆಟ್‌ಗಳಾದ ಪ್ರಥಮ ಬಿಬಿಎಯ ಎನ್‌ಸಿಸಿ ಧನಪತ್ ಕುಮಾರ್ ಮಾಲಿ, ದ್ವಿತೀಯ ಬಿಎಯ ಸಿಡಿಟಿ ಶ್ರೀನಿವಾಸ್ ಪಿ., ಆಲ್ ಇಂಡಿಯಾ ಗಾರ್ಡ್ ಆಫ್ ಹಾನರ್ ಹಾಗೂ ಪಿಎಂ ರ‍್ಯಾಲಿಯಲ್ಲಿ ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್ ಅನ್ನು ಪ್ರತಿನಿಧಿಸಲಿದ್ದಾರೆ.
6 ವರ್ಷಗಳ ನಂತರ ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಮತ್ತು ನೌಕಾದಳದ ಅಧಿಕಾರಿ ಲೆ. ಕಮಾಂಡರ್ ಡಾ. ಯತೀಶ್ ಕುಮಾರ್ ಶುಭ ಹಾರೈಸಿದ್ದಾರೆ.