
ಆಕಾಶದಲ್ಲಿ ಗ್ರಹಗಳ ಪೆರೇಡ್: ಪಿಲಿಕುಳದಲ್ಲಿ ವೀಕ್ಷಣೆ
Friday, January 10, 2025
ಮಂಗಳೂರು: ಈ ವರ್ಷದ ಅಪೂರ್ವ ವಿದ್ಯಮಾನ ಆಕಾಶದಲ್ಲಿ ಗ್ರಹಗಳ ದರ್ಶನ ಬರಿ ಕಣ್ಣಿನಿಂದ ಅಥವಾ ಬೈನಾಕುಲಾರ್ ಮೂಲಕ ಕೆಲವನ್ನು ನೋಡಬಹುದಾದರೂ ದೂರದರ್ಶಕದಿಂದ ಅವುಗಳನ್ನು ಒಟ್ಟಿಗೆ ನೋಡುವುದೇ ಚೆಂದ.
ಆಸಕ್ತರಿಗಾಗಿ ಈ ದೃಶ್ಯವನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜನವರಿ 11 ರಂದು ಸಂಜೆ 6.30 ರಿಂದ ದೂರದರ್ಶಕಗಳ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ವೀಕ್ಷಣಾಸಕ್ತರಿಗೆ ದರ್ಶನ ನೀಡಲಿರುವ ಮಂಗಳ, ಗುರು, ಶುಕ್ರ ಮತ್ತು ಶನಿ ಗ್ರಹಗಳಲ್ಲದೆ ಚಂದ್ರನ ಕುಳಿಗಳನ್ನು ಸಹ ಕಾಣಬಹುದು. ಕುತೂಹಲಿಗಳಿಗೆ ನಕ್ಷತ್ರ ಮತ್ತು ನಕ್ಷತ್ರ ಪುಂಜಗಳನ್ನು ಪರಿಚಯಿಸಲಾಗುವುದು ಎಂದು ಪಿಲಿಕುಳ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.