ಹರಿಪ್ರಸಾದ್ ಪಿ ಅವರಿಗೆ ಮೂಡಬಿದ್ರೆ ಯುವವಾಹಿನಿ ಘಟಕದಿಂದ ನುಡಿನಮನ

ಹರಿಪ್ರಸಾದ್ ಪಿ ಅವರಿಗೆ ಮೂಡಬಿದ್ರೆ ಯುವವಾಹಿನಿ ಘಟಕದಿಂದ ನುಡಿನಮನ


ಮೂಡುಬಿದಿರೆ: ಇತ್ತೀಚೆಗೆ ನಿಧನ ಹೊಂದಿರುವ ಹೊಸಂಗಡಿ ಗ್ರಾ. ಪಂ. ಮಾಜಿ ಅಧ್ಯಕ್ಷ, ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಿ. ಅವರಿಗೆ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘದಲ್ಲಿ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನುಡಿನಮನ ಸಲ್ಲಿಸಲಾಯಿತು.

ನಂತರ ಮಾತನಾಡಿದ ಶಂಕರ್ ಕೋಟ್ಯಾನ್ ಅವರು, ಹರಿಪ್ರಸಾದ್ ಅವರ ಅಗಲುವಿಕೆಯ ನೋವು ಹೇಳಿಕೊಳ್ಳಾಗುವಂತದಲ್ಲ. ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ನುಡಿನಮನ ಸಲ್ಲಿಸಿ, ತನ್ನ ಕಾಲೇಜ್ ವಿದ್ಯಾಭ್ಯಾಸ ಸಂದರ್ಭದಿಂದಲೇ ಸಮಾಜ ಸೇವೆ ಪ್ರಾರಂಭಿಸಿರುವ ಅವರು ಗಾಂಧೀಜಿ ಅವರ ರಾಮರಾಜ್ಯದ ಕನಸು ಕಂಡವರು, ನಾರಾಯಣ ಗುರು, ಡಾ. ಬಿ.ಆರ್. ಅಂಬೇಡ್ಕರ್ ಅವರ  ತತ್ವ ಸಂದೇಶ ತನ್ನ ಜೀವನದಲ್ಲಿ ಅಳವಡಿಸಿಕೊಂಡು ದೀನ ದಲಿತರ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದವರು. ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾಗ ಈ ಪಂಚಾಯತಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ  ದೊರೆತು ಎಲ್ಲರೂ ಗಮನಿಸುವಂತೆ ಮಾಡಿದ್ದರು ಎಂದು ನೆನಪಿಸಿದರು.

ಎಲ್ಲರೂ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. 

ನೂತನ  ಅಧ್ಯಕ್ಷ ಮುರಳೀಧರ್ ಕೋಟ್ಯಾನ್, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ನೂತನ ಕಾರ್ಯದರ್ಶಿ ವಿನೀತ್ ಸುವರ್ಣ, ನಿಕಟ ಪೂರ್ವ ಅಧ್ಯಕ್ಷ ಸುಶಾಂತ್ ಕರ್ಕೇರಾ, ಮಾಜಿ ಅಧ್ಯಕ್ಷ ನವಾನಂದ, ಉಪಾಧ್ಯಕ್ಷ ವಿದೇಶ್ ಎಂ.  ಹಾಗೂ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article