
ಈಜು ಸ್ಪರ್ಧೆ: ಫಿಲೋಮಿನಾ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು
ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ಆಶ್ರಯದಲ್ಲಿ ಜನವರಿ 21 ಮತ್ತು 22 ರಂದು ಮಂಗಳೂರಿನ ಯೆಮ್ಮೆಕೆರೆ ಈಜು ಕೊಳದಲ್ಲಿ ನಡೆದ ‘ಕರ್ನಾಟಕ ಕ್ರೀಡಾಕೂಟ-2025’ದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಾಧಿ ಕ್ಲಾರೆ ಪಿಂಟೋ, ದಿಗಂತ್ ವಿ.ಎಸ್., ಅನ್ವಿತ್ ರೈ ಬಾರಿಕೆ ಹಾಗೂ ಆರ್. ಅಮನ್ ರಾಜ್ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪ್ರಥಮ ವಿಜ್ಞಾನ ವಿಭಾಗದ ಪ್ರಾಧಿ ಕ್ಲಾರೆ ಪಿಂಟೋ ಇವರು 200ಮೀ ಫ್ರೀ ಸ್ಟೈಲ್ ಮತ್ತು 4*100ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಚಿನ್ನ, 50ಮೀ, 100ಮೀ, 200ಮೀ ಬ್ಯಾಕ್ ಸ್ಟ್ರೋಕ್, 4*100ಮೀ ಮೆಡ್ಲೆ ರಿಲೇ ಮತ್ತು 4*200ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕವನ್ನು, ದಿಗಂತ್ ವಿ.ಎಸ್. 4*100ಮೀ ಮೆಡ್ಲೆ ರಿಲೇಯಲ್ಲಿ ಚಿನ್ನ, 50ಮೀ, 100ಮೀ, 200ಮೀ ಬ್ಯಾಕ್ ಸ್ಟ್ರೋಕ್, 4*100ಮೀ ಫ್ರೀ ಸ್ಟೈಲ್ ರಿಲೇ, 4*200ಮೀ ಫ್ರೀ ಸ್ಟೈಲ್ ರಿಲೇ ಯಲ್ಲಿ ಬೆಳ್ಳಿ ಮತ್ತು 50ಮೀ ಬ್ರೀಸ್ಟ್ ಸ್ಟ್ರೋಕ್ ನಲ್ಲಿ ಕಂಚಿನ ಪದಕವನ್ನು, ಅನ್ವಿತ್ ರೈ ಬಾರಿಕೆ 50ಮೀ ಬಟರ್ ಫ್ಲೈ, 50ಮೀ ಫ್ರೀ ಸ್ಟೈಲ್, 4*100ಮೀ ಫ್ರೀ ಸ್ಟೈಲ್ ರಿಲೇ, 4*200ಮೀ ಫ್ರೀ ಸ್ಟೈಲ್ ರಿಲೇ ಮತ್ತು 4*00ಮೀ ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಹಾಗೂ 100ಮೀ ಬಟರ್ ಫ್ಲೈ ಹಾಗೂ 100ಮೀ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕವನ್ನು ಹಾಗೂ ಆರ್. ಅಮನ್ ರಾಜ್ 4*100ಮೀ ಫ್ರೀ ಸ್ಟೈಲ್ ರಿಲೇ, 4*200ಮೀ ಫ್ರೀ ಸ್ಟೈಲ್ ರಿಲೇ ಮತ್ತು 4*100ಮೀ ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಹಾಗೂ 400ಮೀ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದರೆ.
ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್‌ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ.ಆರ್., ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.