ಪುತ್ತೂರು: ರಾಜ್ಯ ಒಲಿಂಪಿಕ್ಸ್ ಅಥ್ಲೆಟಿಕ್ ಕೂಟದ ಹೈಜಂಪ್‌ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಥಮ ಬಿಕಾಂನ ವಿದ್ಯಾರ್ಥಿ ಯಶ್ವಿನ್ ಕಂಚಿನ ಪದಕ ಪಡೆದಿದ್ದು, ಇವರನ್ನು ಸಂಸ್ಥೆಯ ಸಂಚಾಲಕ ಅತಿ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಭಿನಂದಿಸಿದ್ದಾರೆ.