
ವಿಕ್ರಮ್ ಗೌಡ ಕುಟುಂಬಕ್ಕೂ ಪ್ಯಾಕೇಜ್ ಕೊಡಿ
Wednesday, January 8, 2025
ಉಡುಪಿ: ನಕ್ಸಲ್ ಚಟುವಟಿಕೆಗೆ ತಿಲಾಂಜಲಿ ನೀಡಿ, ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲಿಗೆ ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೊಲೀಸ್ ಎನ್‌ಕೌಂಟರಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಮ್ ಗೌಡ ಕುಟುಂಬಕ್ಕೂ ಸರ್ಕಾರ ಪ್ಯಾಕೇಜ್ ನೀಡಲಿ ಎಂದು ಆತನ ಸಹೋದರಿ ಸುಗುಣ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮ ಅಣ್ಣನ ಜೀವ ತೆಗೆದುಕೊಂಡಿತು. ಆತನನ್ನು ಉಳಿಸಲಾಗಲಿಲ್ಲ. ಅದರೆ, ಪರಿಹಾರ ಕೊಟ್ಟರೆ ಬಹಳ ಕಷ್ಟದಿಂದ ಸಾಗುತ್ತಿರುವ ತಮ್ಮ ಬದುಕಿಗೆ ಒಂದಷ್ಟು ಸಹಾಯವಾಗುತ್ತದೆ ಎಂದು ಸುಗುಣ ಹೇಳಿದರು.