
ಕೆಚ್ಚಲು ಕೊಯ್ದ ಪ್ರಕರಣ: ಅಪಾಯದ ಸೂಚನೆ
Monday, January 13, 2025
ಉಡುಪಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಗೋವಿನ ಮೇಲಿನ ಹಿಂಸೆ ಮುಂಬರುವ ಭಾರೀ ಅಪಾಯದ ಮುನ್ಸೂಚನೆ ಎಂದು ಪರ‍್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಎಚ್ಚರಿಕೆ ನೀಡಿದ್ದಾರೆ.
ದೇವರ ಸನ್ನಿಧಾನ ಎಂದು ಭಾವಿಸಿ, ಪವಿತ್ರವಸ್ತು ಗೋವುಗಳನ್ನು ಭಾರತದಲ್ಲಿ ಪೂಜಿಸಲಾಗುತ್ತಿದೆ. ಅವುಗಳ ಮೇಲಿನ ದೌರ್ಜನ್ಯದಿಂದ ನಮಗೆ ಭಾರೀ ಆಘಾತವಾಗಿದೆ. ಈ ಘಟನೆಯನ್ನು ಕೇವಲ ಗೋವುಗಳ ಮೇಲೆ ನಡೆದ ಘಟನೆ ಎಂಬುದಾಗಿ ಮಾತ್ರ ಭಾವಿಸದೇ ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ಇಂಥ ಘಟನೆಗಳು ಭಯಾನಕವಾಗಿದ್ದು, ಚಿಂತನೀಯವಾಗಿದೆ. ಮುಂದೆ ಏನಾಗಬಹುದು ಎಂದು ಯೋಚಿಸಿದಾಗ ಕತ್ತಲು ಕವಿದಂತಾಗಿದೆ. ಕ್ರೂರವಾದ ಈ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಪರಾಧಿಗಳನ್ನು ಶಿಕ್ಷಿಸಿ, ಮತ್ತೆ ಇಂಥ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಗೋಪಾಲಕೃಷ್ಣನ ಸನ್ನಿಧಿಯಲ್ಲಿದ್ದು ಎಚ್ಚರಿಸುತ್ತಿರುವುದಾಗಿ ತಿಳಿಸಿದ್ದಾರೆ.