
ನಗದು ಸಹಿತ ಸಹಾಯಕ ಅಂಚೆ ಪಾಲಕ ಕಾಣೆ
Sunday, February 23, 2025
ಬಂಟ್ವಾಳ: ಸಜೀಪಪಡು ಗ್ರಾಮದ ಸಹಾಯಕ ಅಂಚೆ ಪಾಲಕ 72 ಸಾ.ರೂ. ನಗದು ಸಹಿತ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ಸಹಾಯಕ ಅಂಚೆಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಫೆ.19 ಪಾಣೆಮಂಗಳೂರು ಅಂಚೆ ಕಛೇರಿಗೆ ಅಂಚೆ ಮತ್ತು ಟಪಾಲುಗಳೊಂದಿಗೆ ತೆರಳಿದ್ದು, ಆದರೆ ಅಲ್ಲಿ ತೆರಳಿರುವ ಈತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತೆನ್ನಲಾಗಿದೆ.
ಬಳಿಕ ಸಜೀಪಮೂಡ ಗ್ರಾಮದ ಕಂದೂರು ಎಂಬಲ್ಲಿರುವ ಈತನ ಬಾಡಿಗೆ ರೂಮ್‌ಗೆ ಬಂದು ನೋಡಿದಾಗ ಟಪ್ಪಾಲು ಯಥಾ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ನಗದಿನೊಂದಿಗೆ ಕಾಣೆಯಾಗಿದ್ದಾನೆ ಎಂದು ಸಜೀಪನಡು ಗ್ರಾಮದ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್ ಅವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.