
ಫ್ಯಾನ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್: ಇಲೆಕ್ಟ್ರೀಶಿಯನ್ ಮೃತ್ಯು
Saturday, February 8, 2025
ಬಂಟ್ವಾಳ: ಫ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಇಲೆಕ್ಟ್ರೀಶಿಯನ್ ಮೃತಪಟ್ಟ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ನಡೆದಿದೆ.
ತಾಲೂಕಿನ ಅರಳ ನಿವಾಸಿ ಭವಾನಿ ಶಂಕರ ಯಾನೆ ರಾಜೇಶ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ.
ರಾಜೇಶ್ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲ್‌ನಲ್ಲಿರವ ತಂಗಿ ಮನೆಯಲ್ಲಿ ಸೀಲಿಂಗ್ ಪ್ಯಾನ್ ರಿಪೇರಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅಚಾನಕ್ ಆಗಿ ಕರೆಂಟ್ ಶಾಕ್ ತಗುಲಿ ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.