
ಮೇಯರ್ ತಂಡದಿಂದ ಅಕ್ರಮ ಕಸಾಯಿಖಾನೆಗೆ ದಾಳಿ ಸ್ವಾಗತರ್ಹ: ಅಕ್ರಮ ಕಸಾಯಿಖಾನೆಯನ್ನು ತಕ್ಷಣ ನೆಲಸಮ ಗೊಳಿಸಲು ವಿಹೆಚ್‌ಪಿ ಆಗ್ರಹ
Saturday, February 8, 2025
ಮಂಗಳೂರು: ಕುದ್ರೋಳಿ ಕಸಾಯಿಖಾನೆ ಬಂದ್ ಆಗಿದ್ದರೂ ಇವತ್ತು ಅಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ವಧೆ ಮಾಡಿರುವುದು ಕಂಡು ಬಂದಿದೆ. ಇದರ ಹಿಂದೆ ಗೋ ಮಾಫಿಯದ ವ್ಯವಸ್ಥಿತ ದಂಧೆಯಾಗಿದೆ. ತಕ್ಷಣ ಜಿಲ್ಲಾಡಳಿತ ಆರೋಪಿಗಳನ್ನು ಬಂಧಿಸಿ ಅಕ್ರಮ ಕಸಾಯಿಖಾನೆಗಳನ್ನು ನೆಲಸಮಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಪ್ರಕಟಣೆಯಲ್ಲಿ ಆಗ್ರಹಿಸಿದೆ.