
ರಸ್ತೆ, ಸಂತೆ ಮಾರುಕಟ್ಟೆಗೆ ಮಮತಾ ಗಟ್ಟಿ ಶಿಲಾನ್ಯಾಸ
ಉಳ್ಳಾಲ: ಕ್ಷೇತ್ರ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತಿದ್ದು ಬಾಳೆಪುಣಿ ಗ್ರಾಮದಲ್ಲೂ ಅಭಿವೃದ್ಧಿ ಕಾಮಗಾರಿ ನಡೆದಿದೆ. ಬಾಕಿಯುಳಿದ ಕಾಮಗಾರಿ ಶೀಘ್ರ ನಡೆಯಲಿದೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ಗ್ರಾಮದ ಪಡಿಕ್ಕಲ್ ರಸ್ತೆಗೆ ಕಾಂಕ್ರೀಟ್, ಮುಡಿಪು ಸಮೀಪ ಸಂತೆ ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಹೈದರ್ ಕೈರಂಗಳ ಮಾತನಾಡಿ, ಹಲವು ವರ್ಷಗಳ ಬೇಡಿಕೆಯ ಫಲವಾಗಿ ಮುಖ್ಯ ರಸ್ತೆಯಿಂದ ಪಡಿಕ್ಕಲ್ ಒಳರಸ್ತೆ ಸಂಪೂರ್ಣ ಕಾಂಕ್ರೀಟ್‌ಗೆ ಸ್ಪೀಕರ್ ಖಾದರ್ ಅನುದಾನ ನೀಡಿದ್ದಾರೆ. ಹಲವು ವರ್ಷ ಬಾಳಿಕೆ ಬರುವ ನಿಟ್ಟಿನಲ್ಲಿ ಸರ್ವರು ಸಹಕಾರ ನೀಡಬೇಕು, ಮುಂದಿನ ದಿನಗಳಲ್ಲಿ ಒಳರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.
ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷೆ ಸುಕನ್ಯಾ, ಸದಸ್ಯರಾದ ಅಬ್ದುಲ್ ರಹ್ಮಾನ್ ತೋಟಾಲ್, ಝೊಹರಾ, ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಮಾಅತ್ ಗೌರವಾಧ್ಯಕ್ಷ ಬಾವ, ಖತೀಬ್ ನಾಸಿರುದ್ದೀನ್ ಮದನಿ, ಸೇಕುಞಿ, ಯು.ಎಸ್. ಮಹಮ್ಮದ್, ಇಸ್ಮಾಯಿಲ್, ಬಾವಾ ಹಾಜಿ ಪಡಿಕ್ಕಲ್, ಅಬ್ಬು ಹಾಜಿ ಪಡಿಕಲ್, ಅಬೂಬಕ್ಕರ್ ಮದನಿ ಪಡಿಕ್ಕಲ್, ಅಬ್ಬಾಸ್ ಪಡಿಕ್ಕಲ್, ಕಲಂದರ್, ಸತ್ತಾರ್ ಕೈರಂಗಳ, ನಾಸೀರ್, ಅರುಣ್ ಡಿಸೋಜ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.