
ಅಕ್ರಮ ಕಸಾಯಿಖಾನೆ ಮೇಲೆ ಬೆಳ್ತಂಗಡಿ ಪೊಲೀಸ್ ದಾಳಿ: ದನದ ಮಾಂಸ ಹಾಗೂ ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಗುರುವಾಯನಕೆರೆಯಲ್ಲಿರುವ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.
ಹಲವರು ಸಮಯಗಳಿಂದ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಇಬ್ಬರು ಆರೋಪಿಗಳಾದ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಉಮರಬ್ಬ(42) ಮತ್ತು ಪಡಂಗಡಿ ಗ್ರಾಮದ ಪೆರ್ಣಮಂಜ ನಿವಾಸಿ ಕರೀಂ(34) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿರುವ ಅನ್ವಾರ್ ಎಂಬಾತನಿಗೆ ಸೇರಿದ ಜಾಗದಲ್ಲಿ ಅನಧಿಕೃತ ಕಸಾಯಿಖಾನೆಯಲ್ಲಿ ಇಬ್ಬರು ಸೇರಿ ದನವನ್ನು ವಧೆ ಮಾಡುವಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದು. ಸ್ಥಳದಲ್ಲಿ ಸುಮಾರು ೮೫ ಕೆ.ಜಿ ದನ ಮಾಂಸ, ಕತ್ತಿ, ಒಂದು ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ರವಿ ಕುಮಾರ್ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸುಬ್ಬಪುರ್ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್‌ಸಪೆಕ್ಟರ್ ಯಲ್ಲಪ್ಪ ಹೆಚ್.ಎಂ. ನೇತೃತ್ವದ ಸಿಬ್ಬಂದಿ ಬೆನ್ನಚ್ಚನ್, ಪ್ರಮೋದ್ ನಾಯ್ಕ, ವಿಶ್ವನಾಥ್ ನಾಯ್ಕ್, ಜಗದೀಶ್ ಅತ್ತಾಜೆ, ಚರಣ್ ರಾಜ್, ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.i