
ಫೆ.24ರಿಂದ ಕದ್ರಿ ಮೈದಾನದಲ್ಲಿ ಉಚಿತ ಸಹಸ್ರ ಲಿಂಗ ದರ್ಶನ
Sunday, February 23, 2025
ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಇದರ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಫೆ.24ರಿಂದ 28ರವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದ ಕದ್ರಿ ಮೈದಾನದಲ್ಲಿ ಉಚಿತ ಸಹಸ್ರ ಲಿಂಗ ದರ್ಶನ ಏರ್ಪಡಿಸಲಾಗಿದೆ.
ಪ್ರತೀ ದಿನ ಬೆಳಗ್ಗೆ 7ರಿಂದ 8ರವರೆಗೆ ಹಾಗೂ ಸಂಜೆ 6 ರಿಂದ 7ರವರೆಗೆ ಶಿವಧ್ಯಾನ ಶಿಬಿರ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ನಡೆಯಲಿದೆ. ಫೆ.24ರಂದು ಸಾಯಂಕಾಲ 5ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ, ಉದ್ಯಮಿ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ರಹ್ಮಕುಮಾರಿ ವಿಶ್ವೇಶ್ವರಿ ಶಿವ ಸಂದೇಶ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.