ನೂತನ ಸೇತುವೆಯ ಲೋಕಾರ್ಪಣೆ ಮಾಡಿದ ಶಾಸಕ ಕಾಮತ್

ನೂತನ ಸೇತುವೆಯ ಲೋಕಾರ್ಪಣೆ ಮಾಡಿದ ಶಾಸಕ ಕಾಮತ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 42ನೇ ಡೊಂಗರಕೇರಿ ವಾರ್ಡಿನ ಕಂಬಳ ಕ್ರಾಸ್ ರಸ್ತೆಯಲ್ಲಿದ್ದ ಹಳೆಯ ಸೇತುವೆಯನ್ನು ಕೆಡವಿ ನೂತನವಾಗಿ ನಿರ್ಮಿಸಲಾದ ಸೇತುವೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ಲೋಕಾರ್ಪಣೆಗೊಳಿಸಿದರು. 

ನಂತರ ಮಾತನಾಡಿದ ಶಾಸಕರು ಈ ಹಿಂದೆ ಇಲ್ಲಿದ್ದ ಸೇತುವೆ ಅನೇಕ ವರ್ಷಗಳಷ್ಟು ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿದ್ದರ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯೆ ಶ್ರೀಮತಿ ಜಯಶ್ರೀ ಕುಡ್ವರವರು ಮುತುವರ್ಜಿ ವಹಿಸಿ ಅನೇಕ ಬಾರಿ ಗಮನ ಸೆಳೆದಿದ್ದರು. ಅದರಂತೆ ನಡೆದಾಡಲು ಸಹ ಕಷ್ಟವಾಗಿದ್ದ ಇಲ್ಲಿನ ಹಳೆಯ ಸೇತುವೆಯನ್ನು ಕೆಡವಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಪಾಲಿಕೆಯ ಸಾಮಾನ್ಯ ನಿಧಿಯಿಂದ ನೂತನವಾಗಿ ಸೇತುವೆ ನಿರ್ಮಿಸಿ ಇದೀಗ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಭಾನುಮತಿ, ಭರತ್ ಕುಮಾರ್, ಗಣೇಶ್ ಕುಲಾಲ್, ರಮೇಶ್ ಹೆಗ್ಡೆ, ಭವಾನಿ ಶಂಕರ್, ದೇವಾನಂದ ಶೆಣೈ, ರಾಜೇಂದ್ರಕುಮಾರ್, ದೇವಾನಂದ ಪೈ, ಪ್ರವೀಣ್ ಕುದ್ರೋಳಿ, ನಾಗೇಶ್, ಚಂದ್ರಹಾಸ್ ಶೆಟ್ಟಿ, ಜನಾರ್ಧನ ಕುಡ್ವ, ಗೋಪಾಲ ಶೇಟ್, ವತ್ಸಲಾ ಕಾಮತ್, ಪುಷ್ಪ ಶೆಟ್ಟಿ, ಅಂಜಲಿ ಬಾಳಿಗ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article