
ಫಲಾನುಭವಿಗಳಿಗೆ ಸವಲತ್ತು ವಿತರಣೆ
Friday, February 7, 2025
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಶೇ.24.10, ಶೇ.7.25 ಮತ್ತು ಶೇ.5 ನಿಧಿಯಡಿ ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 28 ಫಲಾನುಭವಿಗಳಿಗೆ ಮೇಯರ್ ಮನೋಜ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ 10,13,190 ರೂ. ಮೊತ್ತದ ಚೆಕ್ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.
ಪಾಲಿಕೆಯ ಮೇಯರ್ ಅವರ ಕೊಠಡಿಯಲ್ಲಿ ಆಯೋಜಿಸಲಾದ ಈ ಕಾಯ೯ಕ್ರಮದಲ್ಲಿ ಶೇ.24.5 ಯೋಜನೆಯಡಿ ಬರುವ ಪರಿಷಿಷ್ಟ ಜಾತಿ ಮತ್ತು ಪಂಗಡದ 5 ಫಲಾನುಭವಿಗಳಿಗೆ ತಾಳಿಭಾಗ್ಯಕ್ಕೆ ಸಹಾಯಧನ ಶೇ.7.25 ರ ನಿಧಿಯಡಿ ಹಿಂದುಳಿದ ವಗ೯ದ 12 ಫಲಾನುಭವಿಗಳಿಗೆ ಶಸ್ತ್ರಾ ಚಿಕಿತ್ಸ ವೆಚ್ಚ, ಶೌಚಾಲಯ ವೆಚ್ಚ, ನಳ್ಳಿ ನೀರಿನ ಸೌಲಭ್ಯ ಮತ್ತು ಪಕ್ಕಾ ಮನೆ ಹಾಗೆಯೆ ಶೇ.5 ರ ನಿಧಿಯಡಿ ಅಂಗವಿಕಲರಿಗೆ ಪಕ್ಕಾ ಮನೆ, ಕೃತಕ ಕಾಲು, ಶ್ರವಣ ಸಾಧನ, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ಸಲಕರಣೆಗಳನ್ನು ನೀಡಲಾಯಿತು.
ಉಪಮೇಯರ್ ಭಾನುಮತಿ, ಅಧ್ಯಕ್ಷರಾದ ಸುಮಿತ್ರ ಕರಿಯ, ಸರಿತಾ ಶಶಿಧರ್, ವೀಣಾ ಮಂಗಳ, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ವರುಣ್ ಚೌಟ, ನಯನ ಆರ್. ಕೋಟ್ಯಾನ್, ಅಬ್ದುಲ್ ಲತೀಫ್, ಕಾವ್ಯ ನಟರಾಜ್ ಆಳ್ವ, ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಮಾಲಿನಿ ರೋಡ್ರಿಗಸ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.