
ವಿಟಿಯು ವಾರ್ಷಿಕ ಘಟಿಕೋತ್ಸವದಲ್ಲಿ ಮಿಂಚಿದ ಬಿಐಟಿ ವಿದ್ಯಾರ್ಥಿಗಳು
Monday, February 24, 2025
ಮಂಗಳೂರು: ಶನಿವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ತಮ್ಮ ಸಾಧನೆಗಳ ಮೂಲಕ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಎಂಟೆಕ್ ಸಿಎಸ್‌ಇ ಪದವೀಧರೆ ತಸ್ನಿಮ್ ಖಾಲಿದ್ ಅವರು 9.43 ಸರಾಸರಿ ಅಂಕಗಳನ್ನು ಪಡೆಯುವ ಮೂಲಕ ಎಂಟನೆ ರ‍್ಯಾಂಕ್ ಪಡೆದುಕೊಂಡು, ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮತ್ತೊಬ್ಬ ಎಂಟೆಕ್ ಸಿಎಸ್‌ಇ ಪದವೀಧರೆ ಅಯ್ಶುತುಲ್ ಸಜೀನಾ ಅವರು 9.53 ಸರಾಸರಿ ಅಂಕಗಳನ್ನು ಪಡೆಯುವ ಮೂಲಕ 5ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇಬ್ಬರೂ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿರುವ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಡಳಿತ ಮಂಡಳಿ, ಅವರಿಬ್ಬರ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವವನ್ನು ಪ್ರಶಂಸಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.