
ಓಡಾಟಕ್ಕೆ ಕಾರು ಪಡೆದು ಮಾರಾಟ
Tuesday, February 18, 2025
ಮಂಗಳೂರು: ಮದುವೆ ಸಮಾರಂಭದ ಸಂದರ್ಭದಲ್ಲಿ ಓಡಾಟಕ್ಕೆಂದು ಟೊಯೊಟಾ ಫಾರ್ಚುನರ್ ಕಾರನ್ನು ಪಡೆದು ಅದನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಸಹೋದರ ಸಂಬಂಧಿ ಮಹಮ್ಮದ್ ಇಕ್ಬಾಲ್ ಅವರ ಟೊಯೊಟಾ ಫಾರ್ಚುನರ್ ಕಾರನ್ನು ಪರಿಚಯಸ್ಥರಾದ ಉಚ್ಚಿಲ ನಿವಾಸಿ ಮಕ್ಯೂಮ್ ಎಂಬಾತ ತನ್ನ ತಂಗಿಯ ಮದುವೆ ಕಾರ್ಯಕ್ರಮದ ಸಲುವಾಗಿ ಓಡಾಟಕ್ಕೆಂದು ಕೆಲ ಸಮಯದ ಹಿಂದೆ ಕೊಂಡೊಯ್ದಿದ್ದ. 10 ದಿನಗಳಲ್ಲಿ ಕಾರನ್ನು ಮರಳಿಸುವುದಾಗಿ ತಿಳಿಸಿದ್ದ. ಆ ಬಳಿಕವೂ ಕಾರನ್ನು ಮರಳಿಸಿಲ್ಲ ಎಂದು ಇಡ್ಯಾದ ಅಬ್ದುಲ್ ಸಮೀರ್ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
’ಕಾರಿನ ಬಗ್ಗೆ ವಿಚಾರಿಸಿದಾಗ ಅದನ್ನು ಮೈಸೂರಿನ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿರುವುದು ಗೊತ್ತಾಗಿದೆ. ಅದನ್ನು ಖರೀದಿಸಿದ ವ್ಯಕ್ತಿ ನಕಲಿ ದಾಖಲಾತಿಗಳನ್ನು ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಅಬ್ದುಲ್ ಸಮೀರ್ ದೂರಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.