ಆಳ್ವಾಸ್‌ನಿಂದ ಸಮಾಜಕ್ಕೆ ಮತ್ತೊಂದು ಕೊಡುಗೆ: ದುರ್ಬಲ-ವೃದ್ಧ ರೋಗಿಗಳಿಗೆ ಆರೋಗ್ಯ ಸೌಲಭ್ಯ

ಆಳ್ವಾಸ್‌ನಿಂದ ಸಮಾಜಕ್ಕೆ ಮತ್ತೊಂದು ಕೊಡುಗೆ: ದುರ್ಬಲ-ವೃದ್ಧ ರೋಗಿಗಳಿಗೆ ಆರೋಗ್ಯ ಸೌಲಭ್ಯ


ಮೂಡುಬಿದಿರೆ: ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇದೀಗ ಸಮಾಜ ಸೇವೆಯ ಮೂಲಕ ಮತ್ತೊಂದು ಕೊಡುಗೆಯನ್ನು ನೀಡಲು ಸಂಸ್ಥೆಯು ಹೊರಟಿದ್ದು ಪ್ರತಿ ವರ್ಷ 80 ಕೋಟಿಗೂ ಅಧಿಕ ವೆಚ್ಚವನ್ನು ಸಮಾಜ ಸೇವೆಗೆ ವಿನಿಯೋಗಿಸುತಿದೆ. ಈಗ ಆಳ್ವಾಸ್ ಹೆಲ್ತ್ ಸೆಂಟರ್‌ನ ಮೂಲಕ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ದುರ್ಬಲ-ವೃದ್ಧ ರೋಗಿಗಳಿಗೆ ಆರೋಗ್ಯ ಸೇವಾ ಸೌಲಭ್ಯವನ್ನು ಅವರ ವಾಸಸ್ಥಳಕ್ಕೇ ತಲುಪಿಸುವ ಯೋಜನೆಯನ್ನು ರೂಪಿಸಿ, ಅನುಷ್ಠಾನಕ್ಕೆ ತರಲಿದೆ.

ಮನೆಮಂದಿಯಲ್ಲಿ ಯಾರೇ ಆದರೂ ದೀರ್ಘಕಾಲದ ಅನಾರೋಗ್ಯಕ್ಕೊಳಗಾದರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೆ ಮನೆಯಲ್ಲೇ ಇರುವ ಅಥವಾ ಉದ್ಯೋಗಕ್ಕಾಗಿ ದೇಶ-ವಿದೇಶಗಳಲ್ಲಿ ನೆಲೆಗೊಂಡಿರುವ ಮನೆಮಂದಿ ಅಂಥವರ ಆರೋಗ್ಯಸೇವೆಗಾಗಿ ಕಷ್ಟಪಡುತ್ತಿರುವುದನ್ನು ಸಾಮಾನ್ಯವಾಗಿದೆ. ಅನಾರೋಗ್ಯ ಪೀಡಿತರನ್ನು ವೇಳಾ ಪಟ್ಟಿಗೆ ಅನುಗುಣವಾಗಿ ಆರೋಗ್ಯ ಕೇಂದ್ರಕ್ಕೆ ಸಾಗಿಸುವುದು, ಚಿಕಿತ್ಸೆ ಕೊಡಿಸುವುದು ತುಂಬಾ ವೆಚ್ಚದಾಯಕವಾಗಿದೆ. ಇಂಥಾ ಅಸಹಾಯಕ ಕುಟುಂಬಗಳ ಬೆನ್ನಿಗೆ ನಿಂತು ಕಡಿಮೆ ಖರ್ಚಿನಲ್ಲಿ ಅವರ ಮನೆಗೆ ಹೋಗಿ ಆರೋಗ್ಯ ಸೇವೆ ನೀಡಲು ಆಳ್ವಾಸ್ ಹೆಲ್ತ್ ಸೆಂಟರ್ ಯೋಜನೆ ಸಿದ್ಧಗೊಳಿಸಿದೆ. 

ಈ ಯೋಜನೆಯ ಫಲವಾಗಿ ನಮ್ಮ ವೈದ್ಯರು ಸಕಲ ವೈದ್ಯಕೀಯ ಸಲಕರಣೆಗಳೊಂದಿಗೆ ಅನಾರೋಗ್ಯಪೀಡಿತರ ಮನೆಗೆ ಹೋಗಿ ಅಗತ್ಯ ಚಿಕಿತ್ಸೆಗಳನ್ನು ಕೊಡುವುದಲ್ಲದೆ, ವೇಳಾಪಟ್ಟಿಗನುಗುಣವಾಗಿ ಅವರ ಸೇವೆಯ ನಿರಂತರತೆಯನ್ನು ಗುಣಮುಖರಾಗುವಲ್ಲಿವರೆಗೆ ಕಾಯ್ದುಕೊಳ್ಳಲಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಡಾ. ವಿಷ್ಣು ಆರ್- 7899894808, 7259596808 ಹಾಗೂ ಸುಮನ್ 9663555378 ಅವರನ್ನು ಸಂಪರ್ಕಿಸಬಹುದಾಗಿದೆ. 


ಮಾನವೀಯ ನೆಲೆಯಲ್ಲಿ ಚಿಂತಿಸಿ, ಸಹಜ ಸೇವಾ ಕೈಂಕರ್ಯವಿದಾಗಬೇಕೆಂದು ಬಯಸಿ ಕೈಗೊಂಡ ಈ ಸೇವೆಯು ಅತೀ ಸಾಮಾನ್ಯ ವೆಚ್ಚದಲ್ಲಿ ದೊರೆಯಲಿದ್ದು ಅಸಹಾಯಕರಿಗೆ ಆರೋಗ್ಯವನ್ನೂ ಮನೆಮಂದಿಗೆ ನೆಮ್ಮದಿಯನ್ನೂ ತಂದುಕೊಡುವುದರಲ್ಲಿ ಸಂಶಯವಿಲ್ಲ. ಮೂಡುಬಿದಿರೆ ಮತ್ತು ಆಸುಪಾಸಿನ ಊರಗಳ ಜನರು ತಮ್ಮ ಅಗತ್ಯಕ್ಕನುಗುಣವಾಗಿ ಈ ವೈದ್ಯಕೀಯ ಸೇವೆಯನ್ನು ಬಳಸಿಕೊಂಡು ಕುಟುಂಬದ ನೆಮ್ಮದಿಗೆ ಸಹಕಾರಿಗಳಾಗುವಂತೆ ಈ ಮೂಲಕ ವಿನಂತಿಸುತ್ತಿದ್ದೇವೆ. -ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article