ಮೂಡುಬಿದಿರೆ ತಾಲೂಕಿನಲ್ಲಿ ನೂತನ ಎರಡು ಪಶು ಆಸ್ಪತ್ರೆ ಕಟ್ಟಡಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ಮೂಡುಬಿದಿರೆ ತಾಲೂಕಿನಲ್ಲಿ ನೂತನ ಎರಡು ಪಶು ಆಸ್ಪತ್ರೆ ಕಟ್ಟಡಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ


ಮೂಡುಬಿದಿರೆ: ದ.ಕ.ಜಿ.ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್.ಐ.ಡಿ.ಎಫ್-28ರಲ್ಲಿ ಮಂಜೂರಾದ ತಾಲೂಕಿನ ಮೂಡುಬಿದಿರೆ ಮತ್ತು ಶಿತಾ೯ಡಿಯಲ್ಲಿ ತಲಾ 53.5 ಲಕ್ಷ ವೆಚ್ಚದಲ್ಲಿ ನಿಮಾ೯ಣಗೊಳ್ಳಲಿರುವ ಪಶು ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶುಕ್ರವಾರ ಶಿಲಾನ್ಯಾಸಗೈದರು.


ಬಳಿಕ ಮಾತನಾಡಿದ ಕೋಟ್ಯಾನ್ ಅವರು, ಹಿಂದಿನ ತಮ್ಮ ಸರಕಾರದ ಅವಧಿಯಲ್ಲಿ ತಾಲೂಕಿಗೆ ಎರಡು ನೂತನ ಪಶು ಚಿಕಿತ್ಸಾ ಆಸ್ಪತ್ರೆಗಳು ಮಂಜೂರಾಗಿತ್ತು. ಕಾರಣಾಂತರಗಳಿಂದ ನಿಮಾ೯ಣದ ಕಾಮಗಾರಿ ತಡವಾಗಿದೆ. ಇದೀಗ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ನೂತನ ಪಶು ಆಸ್ಪತ್ರೆಯನ್ನು ಆದಷ್ಟು ಬೇಗ ಪೂಣ೯ಗೊಳಿಸಲಾಗುವುದು. ಮೂಡುಬಿದಿರೆಗೆ ಈಗಾಗಲೇ ಎಂಆರ್‌ಪಿಎಲ್‌ನ ಸಿಆರ್‌ಎಸ್ ಫಂಡಿನಿಂದ ಪಶು ಶಸ್ತ್ರ ಚಿಕಿತ್ಸಾ ವಿಭಾಗವನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇಕಾಗುವ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದ ಅವರು ಈ ಪಶು ಆಸ್ಪತ್ರೆಯ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕೆಂದರು.


ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಸೌಮ್ಯ ಶೆಟ್ಟಿ, ಪ್ರಸಾದ್ ಭಂಡಾರಿ, ಶಿತಾ೯ಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೇಸ್ ಡಿ’ಸೋಜ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಂತೋಷ್, ಪ್ರವೀಣ್ ಕುಮಾರ್ ಜೈನ್, ಸಂತೋಷ್, ತಾಲೂಕು ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ, ಜಿಲ್ಲಾ ಸಹಾಯಕ ಪಶು ಉಪನಿದೇ೯ಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಹಿರಿಯ ಪಶು ಡಾ. ಮಲ್ಲಿಕಾರ್ಜುನ ರಾಯಪ್ಪ ಈಳಿಗೇರ, ಎಂಜಿನಿಯರ್ ದತ್ತಾತ್ರೆಯ ಕುಲಕಣಿ೯, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article