ಇ.ಎಸ್.ಐ ಆಸ್ಪತ್ರೆ ಶೀಘ್ರ ಪ್ರಾರಂಭಿಸಲು ಕ್ರಮ

ಇ.ಎಸ್.ಐ ಆಸ್ಪತ್ರೆ ಶೀಘ್ರ ಪ್ರಾರಂಭಿಸಲು ಕ್ರಮ


ಉಡುಪಿ: ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ಸುಮಾರು 5 ಎಕ್ರೆ ವಿಸ್ತೀರ್ಣದಲ್ಲಿ 100 ಬೆಡ್‌ಗಳುಳ್ಳ ಇ.ಎಸ್.ಐ ಆಸ್ಪತ್ರೆ ಪ್ರಾರಂಭಿಸುವ ಬಗ್ಗೆ 2022ರಲ್ಲಿ ಕೇಂದ್ರ ಸರ್ಕಾರ 150 ಕೋಟಿ ರೂ. ಮೀಸಲಿಟ್ಟಿದ್ದು, ಶೀಘ್ರ ಆಸ್ಪತ್ರೆ ನಿರ್ಮಾಣ ಕಾರ‍್ಯ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಆಸ್ಪತ್ರೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈ ಹಿಂದಿನ ಗುತ್ತಿಗೆದಾರರು ಸಕಾಲದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದ ಕಾರಣ ಈ ಹಿಂದಿನ ಟೆಂಡರ್ ಪ್ರಕ್ರಿಯೆ ರದ್ದುಪಡಿಸಲಾಗಿದೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿ ಪುನಃ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article