ಬಂಟ್ವಾಳ ಪುರಸಭೆ: ವಿರೋಧದ ನಡುವೆ ಅಯವ್ಯಯಕ್ಕೆ ಅನುಮೋದನೆ

ಬಂಟ್ವಾಳ ಪುರಸಭೆ: ವಿರೋಧದ ನಡುವೆ ಅಯವ್ಯಯಕ್ಕೆ ಅನುಮೋದನೆ


ಬಂಟ್ವಾಳ: ವಿಪಕ್ಷ ಬಿಜೆಪಿ ಸದಸ್ಯರ ಆಕ್ಷೇಪ, ವಿರೋಧದ ನಡುವೆಯು ಬಂಟ್ವಾಳ ಪುರಸಭೆಯ 2025-26ನೇ ಸಾಲಿನ 25,25,997.00 ರೂ.ವಿನ ಮಿಗತೆ ಆಯ-ವ್ಯಯವನ್ನು ಬುಧವಾರ ನಡೆದ ವಿಶೇಷ ಸಭೆಯಲ್ಲಿ ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ ಅವರು ಮಂಡಿಸಿ ಬಹುಮತದಿಂದ ಅನುಮೋದನೆ ಪಡೆದರು.

ಆರಂಭಿಕ ನಗದು ಮತ್ರು ಬ್ಯಾಂಕ್ ಶಿಲ್ಕುಗಳು 11,52,05,897.00 ರೂ. ಆಗಿದ್ದು,ವಿವಿಧ ಮೂಲಗಳಿಂದ 36,89,04,007.00 ರೂ.ಜಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ.ಇವುಗಳು ಒಟ್ಟು 48,41,09,904.00 ರೂ.ವಾಗಲಿದೆ.ಇದರಲ್ಲಿ 36,63,78,010.44 ರೂ. ಖರ್ಚನ್ನು ಅಂದಾಜಿಸಲಾಗಿದೆ. 2027 ರ ಮಾ.ಅಂತ್ಯಕ್ಕೆ 11,77,31,894.44 ರೂ .ಕೊನೆಯ ಶುಲ್ಕವಾಗಲಿದ್ದು,ಜಮೆಯಿಂದ ಖರ್ಚನ್ನು ಕಳೆದು ಒಟ್ಟು 25,25,997.00 ಉಳಿತಾಯವಾಗಲಿದೆ ಎಂದು ಅವರು ಸಭೆಗೆ ತಿಳಿಸಿದರು.

ಈ ಸಾಲಿನ ಆಯವ್ಯಯವನ್ನು ಬೆಂಗಳೂರಿನಲ್ಲಿ ತಜ್ಞರ ಜೊತೆ ಚರ್ಚಿಸಿ,ಪರಾಮರ್ಶಿಸಿ ಎಲ್ಲೂ ಲೋಪವಾಗದಂತೆ ಶೇಕಡಾ 100 ರಷ್ಟು ಸಮರ್ಪಕವಾಗಿ ಸಿದ್ದಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು ಸಭೆಯ ಗಮನಕ್ಕೆ ತಂದರು.

ವಿಪಕ್ಷ ಸದಸ್ಯರಿಂದ ಆಕ್ಷೇಪ: 

ವಿಪಕ್ಷ ಸದಸ್ಯರಾದ ಗೋವಿಂದಪ್ರಭು,ಹರಿಪ್ರಸಾದ್ ಭಂಡಾರಿಬೆಟ್ಟು ಅವರು ಆಯವ್ಯಯದಲ್ಲಿರುವ ಲೋಪವನ್ನು ಗುರುತಿಸಿ ಸಭಾಧ್ಯಕ್ಷರ ಗಮನಕ್ಕೆ ತಂದರು.

ಬಜೆಟ್ ಪುಸ್ತಕ ಕೈಗೆ ಸಿಕ್ಕಿದಾಕ್ಷಣ ಇದರಲ್ಲಿ ಕೆಲವೊಂದು ಲೋಪವನ್ನು ಮುಖ್ಯಾಧಿಕಾರಿಯವರ ಗಮನಕ್ಕುತಂದು ಸರಿಪಡಿಸುವಂತೆ ಕೋರಿದ್ದೆ ಆದರೆ ಸ್ಪಂದಿಸಲಿಲ್ಲ ಎಂದು ಸದಸ್ಯ ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಗೋವಿಂದಪ್ರಭು ಹಾಗೂ ಹರಿಪ್ರಸಾದ್ ಅವರು ಆಯವ್ಯಯದಲ್ಲಿರುವ 9 ಲೋಪವನ್ನು ತಕ್ಷಣಕ್ಕೆ ಗುರುತಿಸಿ  ಗಮನಸೆಳೆದರಾದರೂ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಆಯವ್ಯಯವನ್ನು ಸಮರ್ಥಿಸಿಕೊಂಡರು.

ಪುರಸಭೆಯಲ್ಲಿ ಎಲ್ಲವೂ ಚೆಕ್ ಮೂಲಕವೇ ವ್ಯವಹಾರ ನಡೆಸಲಾಗುತ್ತಿದ್ದರೂ ಶುಲ್ಕ ಮಾತ್ರ ಕೇವಲ 857 ರೂ.ತೋರಿಸಲಾಗಿದೆ.ಪಂಪ್ ರಿಪೇರಿಗೆ ಕಳೆದ ಸಾಲಿನ 50 ಲಕ್ಷ ರೂ. ನೀಡಲು ಇನ್ನು ಬಾಕಿ ಇದೆ. ಅದಕ್ಕೆ ಏನು ಕ್ರಮ ಎಂಬುದನ್ನು ಆಯವ್ಯಯದಲ್ಲಿ ತೋರಿಸಿಲ್ಲ,ಸದಸ್ಯರ ವಾಡ್೯ ಅಭಿವೃದ್ದಿಗೆ ತಲಾ ಒರ್ವ ಸದಸ್ಯನಿಗೆ ವರ್ಷಕ್ಕೆ ಜುಜುಬಿ 2 ಲಕ್ಷರೂ.ಕಾದಿರಿಸಲಾಗಿದ್ದು,ಈ ಅನುದಾನದಿಂದ ಸದಸ್ಯ ಯಾವ ಅಭಿವೃದ್ಧಿ ಮಾಡಬೇಕು ಎಂದು  ಸದಸ್ಯ ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ಈ ಸಾಲಿನ ಆಯವ್ಯಯವನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೊರತೆ ಆಯವ್ಯಯದಂತೆ ಕಂಡುಬರುತ್ತಿದೆ ಎಂದು ಬಜೆಟ್ ನಲ್ಲಿನ ಕೆಲ ಲೋಪವನ್ನು ಗುರುತಿಸಿ ಸದಸ್ಯ ಹರಿಪ್ರಸಾದ್ ಸಭೆಯ ಗಮನ ಸೆಳೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article