
ಅಲೋಶಿಯಸ್ ಸಾಧಕರಿಗೆ ಹಳೆ ವಿದ್ಯಾರ್ಥಿ ಪ್ರಶಸ್ತಿ-2025
ಮಂಗಳೂರು: ನಗರದ ಸಂತ ಅಲೋಶಿಯಸ್ ವಿದ್ಯಾಸಂಸ್ಥೆ ಸಂತ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಮಾ.8ರಂದು ಕಾಜೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐದು ವಿಶಿಷ್ಟ ಸಾಧಕರಿಗೆ ಶ್ರೇಷ್ಠ ಅಲೋಶಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು.
2025ರ ಸಾಲಿನ ಶ್ರೇಷ್ಠ ಅಲೋಷಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ಹೆರಂಬ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ವರ್ಷದ ಸಿಐಓ ಪ್ರಶಸ್ತಿ ಪುರಸ್ಕೃತೆ ಲೂಸಿ ಮರಿಯಪ್ಪ, ಸಂಗೀತ ನಿರ್ದೇಶಕ ಡಾ. ಗುರುಕಿರಣ್, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಡಾ. ಆಸ್ಕರ್ ಜಿ. ಕಾನ್ಸೆಸಾವೊ; ಮತ್ತು ಉದ್ಯಮಿ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾ ಅವರಿಗೆ ಪ್ರದಾನ ಮಾಡಲಾಯಿತು.
ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಸಮಾಜಕ್ಕೆ ನೀಡಿದ ಅನುಕರಣೀಯ ಕೊಡುಗೆಗಳಿಗಾಗಿ ಪ್ರಶಸ್ತಿ ಪುರಸ್ಕೃತರನ್ನು ಶ್ಲಾಘಿಸಿದರು
ಅಧ್ಯಕ್ಷತೆ ವಹಿಸಿದ್ದ ರೆ.ಫಾ. ಮೆಲ್ವಿನ್ ಪಿಂಟೊ, ಐವರು ಪ್ರಶಸ್ತಿ ಪುರಸ್ಕೃತರಿಗೂ ಇದು ತವರುಮನೆಗೆ ಬಂದ ಅನುಭವ ಎಂದು ಗಮನಿಸಿದರು. "ನೀವು ದೊಡ್ಡ ಕನಸು ಕಂಡು ಪರಿಶ್ರಮ ಮತ್ತು ಸಮರ್ಪಣೆಯಿಂದ ಸವಾಲುಗಳನ್ನು ಜಯಿಸಿದ್ದೀರಿ," ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟಿ, ಈ ಪ್ರಶಸ್ತಿ ಆಸ್ಕರ್‌ಗಿಂತ ಕಡಿಮೆಯಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ಸಂಚಾಲಕ ಎನ್.ಜಿ. ಮೋಹನ್ ಸ್ವಾಗತಿಸಿದರು, ಸಾಕಾ ಅಧ್ಯಕ್ಷ ಅನಿಲ್ ಕುಮಾರ್ ವಂದಿಸಿದರು. ಅಧ್ಯಾಪಕಿ ರೆನಿತಾ ಅರಾನ್ಹಾ ಕಾರ್ಯಕ್ರಮ ನಿರೂಪಿಸಿದರು.