ದೇವರ ಸೇವೆಗೆ ಕಳಪೆ ಉಪಯೋಗಿಸಿದ ಸೀರೆಗಳು

ದೇವರ ಸೇವೆಗೆ ಕಳಪೆ ಉಪಯೋಗಿಸಿದ ಸೀರೆಗಳು


ಮಂಗಳೂರು: ಕೋಟಿ ಚೆನ್ನಯ್ಯರ ಹಾಗೂ ದೇಯಿ ಬೈದೆತಿ ನೆಲೆಸಿದ ಪುಣ್ಯತಾಣವಾದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಾ1 ರಿಂದ 5 ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿತ್ತು. ದೇವಸ್ಥಾನದ ಭಕ್ತರು ಹಾಗೂ ಆಡಳಿತ ಮಂಡಳಿಯ ಆಶಯದಂತೆ ಈ ಭಾರಿ ಇಲ್ಲಿ ತಾಯಿ ದೇಯಿ ಬೈದೆತಿಗೆ ಮಡಿಲ ಸೇವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಮಡಿಲ ಸೇವೆಯಲ್ಲಿ ಮಹಿಳೆಯರಿಗೆ ನೀಡಲಾದ ಸೀರೆಗಳು ಕಳೆಪೆ ಮಾತ್ರವಲ್ಲದೆ ಉಪಯೋಗಿಸಿದ್ದ ಸೀರೆಗಳು ಅಂತ ಗೊತ್ತಾಗಿದೆ. 

ಹೀಗಾಗಿ ತಾಯಿಗೆ ಮಡಿಲ ಸೇವೆ ಮಾಡಿದರೂ ಭಕ್ತರಿಗೆ ಮಡಿಲು ತುಂಬಿಸಿ ಸೀರೆ ಕೊಡಲು ಕ್ಷೇತ್ರದವರಿಂದ ಅಸಾಧ್ಯವಾಗಿದೆ. ಬಹಳಷ್ಟು ಶ್ರಮವಹಿಸಿ ಈ ಭಾರಿ ಮಡಿಲಸೇವೆಯನ್ನು ಆಯೋಜಿಸಿದ್ದರೂ ಮಡಿಲ ಸೇವೆಗೆ ಸೀರೆ ನೀಡಿದ ಮಂಗಳೂರಿನ ಎಂಪಿ ಸಿಲ್ಕ್ಸ್ ಅಂಗಡಿಯವರು ಪೂರೈಕೆ ಮಾಡಿದ ಈ ಸೀರೆಯಿಂದ ಸೇವೆಗೆ ಅಪಚಾರವಾಗಿದೆ. ಈ ಪದ್ದತಿಯಂತೆ ಆದರೆ ಎಂ.ಪಿ ಸಿಲ್ಕ್ ಸಂಸ್ಥೆ 8000 ಸೀರೆಯನ್ನು ನೀಡಿದ್ದು ಅದರಲ್ಲಿ 75% ಉಪಯೋಗಿಸಿದ ಸೀರೆಯೆಂದು ಭಕ್ತರು ಆರೋಪಿಸಿದ್ದಾರೆ. ಈ ಸೀರೆಯ ಮೊತ್ತ 9 ಲಕ್ಷ 78 ಸಾವಿರದ 925 ರೂ. ಬೆಲೆಯಾಗಿದೆ

ಆದರೆ ಇಷ್ಟೊಂದು ಮೊತ್ತಕ್ಕೆ ನೀಡಿದ ಸೀರೆ ಹರಿದು ಹೋಗಿದ್ದು ನೀಡಿದ ಬೆಲೆಗೆ ಸರಿಯಾದ ಉತ್ತಮ ಗುಣಮಟ್ಟದ ಸೀರೆ ನೀಡಬೇಕೆಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದಿದ್ದಾರೆ.

ಮಾಲೀಕನಿಗೆ ಈ ಮೊದಲು ಗಮನಕ್ಕೆ ತಂದಿದ್ದು ತಪ್ಪೊಪ್ಪಿಕೊಂಡಿದ್ದರು ಇದಕ್ಕೆ ಪರ್ಯಾಯವಾಗಿ ಬೇರೆ ಸೀರೆ ನೀಡುತ್ತೇನೆಂದು ಮಾತುಕೊಟ್ಟಿದ್ದರು ಆದರೆ ಪರ್ಯಾಯ ನೀಡಿದ ಸೀರೆ ಕೂಡ ಇತರರು ಉಪಯೋಗಿಸಿದಂತಿದ್ದು,ಸಂತೆಯಲಿ ಮಾರುವ ಹರಿದ ಸೀರೆಯಂತಿತ್ತು. ಇದರಿಂದ ಅಂಗಡಿ ಮಾಲಿಕನಿಗೆ ಮನವರಿಕೆ ನೀಡಿದರು ಕ್ಯಾರೇ ಎಂದಿದ್ದು ಇಂದು ಎಂ.ಪಿ. ಸಿಲ್ಕ್ ಅಂಗಡಿ ಮುಂದೆ ಸೀರೆ ರಸ್ತೆಯಲ್ಲಿ ಸುರಿದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article